ಚಂದನವನ : ಖ್ಯಾತ ನಟ ಶಂಖನಾದ ಅರವಿಂದ್ ನಿಧನರಾಗಿದ್ದಾರೆ. 60 ವರ್ಷದ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಎರಡು ದಿನಗಳ ಹಿಂದೆ ಬೇಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಅವರು ಇಂದು ವಿಧಿವಶರಾಗಿದ್ದಾರೆ.
ಬೆಟ್ಟದ ಹೂವು, ಅಪರಿಚಿತ, ಶಂಖನಾದ ಚಿತ್ರಗಳಲ್ಲಿ ನಟಿಸಿದ್ದ ಅವರ ನಟನಾ ಕೌಶಲ್ಯವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಹಾಸ್ಯನಟನಾಗಿ, ಪೋಷಕ ನಟನಾಗಿ ಅನೇಕ ಚಿತ್ರಗಳಲ್ಲಿ ಅವರು ಗಮನ ಸೆಳೆದಿದ್ದರು.
Advertisement. Scroll to continue reading.