ಮಧ್ಯಪ್ರದೇಶ : ಕೊರೊನಾ ಸೋಂಕಿನಿಂದ ಗುಣಮುಖನಾಗಲು ಸೀಮೆ ಎಣ್ಣೆ ಕುಡಿದು ವ್ಯಕಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಮಹೇಂದ್ರ ಮೃತಪಟ್ಟ ವ್ಯಕ್ತಿ. ಶಿವನಗರ ಹಿನೋತಿಯಾದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದ ಮಹೇಂದ್ರ ದರ್ಜಿ ಕೆಲಸ ಮಾಡುತ್ತಿದ್ದ.
ಸಣ್ಣ ಪ್ರಮಾಣದ ಜ್ವರ ಬಂದ ಕಾರಣ ತನಗೆ ಕೊರೋನಾ ಸೋಂಕು ತಗುಲಿದೆ ಎಂದು ಆತ ಭಾವಿಸಿದ್ದ ಎನ್ನಲಾಗಿದೆ. ಸೀಮೆಎಣ್ಣೆ ಕುಡಿದರೆ ಕೊರೋನಾ ವೈರಸ್ ನಾಶವಾಗುತ್ತದೆ ಎಂದು ಆv ಬುಧವಾರ ರಾತ್ರಿ 9 ಗಂಟೆಗೆ ಸೀಮೆ ಎಣ್ಣೆ ಕುಡಿದಿದ್ದಾನೆ. ಪರಿಣಾಮ ಸಾವನ್ನಪ್ಪಿದ್ದಾನೆ. ಆದರೆ, ಆತನ ಕೊರೋನಾ ವರದಿ ನೆಗೆಟಿವ್ ಬಂದಿದೆ ಎನ್ನಲಾಗಿದೆ.
ಮಾಧ್ಯಮಗಳ ವರದಿ ಪ್ರಕಾರ, ಸುಮಾರು ಎರಡು ದಿನಗಳ ಹಿಂದೆ ಆತನ ಆರೋಗ್ಯ ಹದಗೆಟ್ಟಾಗ ಆಸ್ಪತ್ರೆಗೆ ದಾಖಲಿಸಲು ಬೆಡ್ ಸಿಕ್ಕಿರಲಿಲ್ಲ ಎಂದು ತಿಳಿದು ಬಂದಿದೆ. ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿದೆ. ವೈದ್ಯರು ಶನಿವಾರ ಮಹೇಂದ್ರ ಸಾವನ್ನಪ್ಪಿದ್ದಾಗಿ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.
Advertisement. Scroll to continue reading.