ಬೆಂಗಳೂರು : ಮೇ 24 ರಿಂದ ಮತ್ತೆ ಲಾಕ್ ಡೌನ್ ಮುಂದುವರೆಯಲಿದೆ. ಜೂನ್ 7 ರ ವರೆಗೆ ಲಾಕ್ ಡೌನ್ ವಿಸ್ತರಿಸಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ.
ಮಾರ್ಗಸೂಚಿಗಳು ಈ ಹಿಂದಿನಂತೆ ಮುಂದುವರೆಯಲಿದೆ. ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯ ವರೆಗೆ ಮಾತ್ರ ಖರೀದಿಗೆ ಅವಕಾಶ. ಒಂಭತ್ತು ಮುಕ್ಕಾಲರ ವರೆಗೆ ಮನೆಗಳಿಗೆ ವಾಪಾಸು ತೆರಳಬೇಕು. ಅನಗತ್ಯವಾಗಿ ತಿರುಗಬಾರದು. ಪೊಲೀಸ್ ಇಲಾಖೆಗೆ ಸೂಚಿಸಲಾಗಿದ್ದು, ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.