Uncategorized

ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಸಂಗೀತ ನಿರ್ದೇಶಕ ರಾಮ್ ಲಕ್ಷ್ಮಣ್ ಇನ್ನಿಲ್ಲ

0

ಬಾಲಿವುಡ್ ಸಿನಿರಂಗ ಕಂಡ ಖ್ಯಾತ ಸಂಗೀತ ನಿರ್ದೇಶಕ ರಾಮ್ ಲಕ್ಷ್ಮಣ್ ವಿಧಿವಶರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ನಾಗಪುರದ ಸ್ವಗೃಹದಲ್ಲಿ ಹೃದಯಾಘಾತದಿಂದ ಅವರು ಇಹಲೋಕ ತ್ಯಜಿಸಿದ್ದಾರೆ.
ರಾಮ್ ಲಕ್ಷ್ಮಣ್ ಮೂಲ ಹೆಸರು ವಿಜಯ್ ಪಾಟೀಲ್. ವಿಶೇಷವೆಂದರೆ ತನ್ನ ಗೆಳೆಯ, ಪಾಟ್ನರ್ ರಾಮ್(ಸುರೇಂದ್ರ) ನಿಧನದ ನಂತರ ಅವರ ಹೆಸರು ತಮ್ಮ ಹೆಸರೊಂದಿಗೆ ಮುಂದುವರೆಸಿಕೊಂಡೇ ಸಾಗಿದರು.

ಸೂಪರ್ ಹಿಟ್ ಹಾಡುಗಳು

ರಾಮ್ ಲಕ್ಷ್ಮಣ್ ಸಂಗೀತ ಸಂಯೋಜಿಸಿರುವ ಹಾಡುಗಳು ಬಹಳಷ್ಟು ಜನಪ್ರಿಯವಾಗಿವೆ. ರಾಜ್ ಶ್ರೀ ಪ್ರೊಡಕ್ಷನ್ ಹಾಗೂ ರಾಮ್ ಲಕ್ಷ್ಮಣ್ ಕಾಂಬಿನೇಷನ್ ಉತ್ತಮ ಹಾಡುಗಳನ್ನು ನೀಡಿ ಜನಪ್ರಿಯವಾಗಿವೆ. `ಪಾಂಡು ಹವಾಲ್ದಾರ್’ ಎಂಬ ಕಾಮಿಡಿ ಮರಾಠಿ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಸಿನಿಲೋಕಕ್ಕೆ ಪದಾರ್ಪಣೆ ಮಾಡಿದರು. ಹಗಿಂದಿ, ಭೋಜ್ ಪುರಿ, ಮರಾಠಿ ಭಾಷೆಯ 200ಕ್ಕೂ ಅಧಿಕ ಚಿತ್ರಗಳಿಗೆ ಸಂಗೀತ ಒದಗಿಸಿದ್ದಾರೆ.

Advertisement. Scroll to continue reading.

ರಾಮ್ ಲಕ್ಷ್ಮಣ್ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ತಂದು ಕೊಟ್ಟಿದ್ದು `ಮೈನೆ ಪ್ಯಾರ್ ಕಿಯಾ’. ಈ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿಯೂ ಒಲಿದಿತ್ತು. ಹಮ್ ಆಪ್ಕೆ ಹೇ ಕೌನ್, ಹಮ್ ಸಾಥ್ ಸಾಥ್ ಹೈ, ಪತ್ತರ್ ಕೇ ಪೂಲ್, 100 ಡೇಸ್, ಅನ್ಮೋಲ್ ಮೊದಲಾದ ಚಿತ್ರಗಳಿಗೆ ಸಂಗೀತ ಸಂಗೀತ ಸಂಯೋಜಿಸಿ ಜನಪ್ರಿಯರಾಗಿದ್ದಾರೆ.

ಸಂತಾಪ ಸೂಚಿಸಿದ ಲತಾ ಮಂಗೇಶ್ಕರ್, ಸಲ್ಮಾನ್ ಖಾನ್

ಸೂಪರ್ ಹಿಟ್ ಹಾಡುಗಳ ನೀಡಿರುವ ಸಾಧಕನ ಅಗಲಿಕೆಗೆ ಚಿತ್ರರಂಗ ಕಂಬನಿ ಮಿಡಿದಿದೆ. ಹಲವು ನಟರು, ಗಾಯಕರು ಸಂತಾಪ ಸೂಚಿಸಿದ್ದಾರೆ. ತನ್ನ ಚಿತ್ರಗಳಿಗೆ ಸೂಪರ್ ಹಿ ಹಾಡುಗಳ ನೀಡಿರುವ ಸಂಗೀತ ನಿರ್ದೇಶಕನ ಆತ್ಮಕ್ಕೆ ಶಾಂತಿ ಕೋರಿ ನಟ ಸನ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ. ರಾಮ್ ಲಕ್ಷ್ಮಣ್ ಸಂಗೀತ ಸಂಯೋಜಿಸಿರುವ ಹಾಡುಗಳಿಗೆ ದನಿಯಾಗಿರುವ ಲತಾ ಮಂಗೇಶ್ಕರ್ ಕೂಡಾ ಸಂತಾಪ ಸೂಚಿಸಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com