ವರದಿ : ಮಹೇಶ್
ಬೈಂದೂರು : ಕಳೆದ ಒಂದು ವರ್ಷದಿಂದ ನಿರಂತರವಾಗಿ ಕೊರೊನಾ ವಾರಿಯರ್ಸ್ ಗಳಿಗೆ ಪಿಪಿಇ ಕಿಟ್ ಹಾಗೂ ಇತರ ವೈದ್ಯಕೀಯ ಕಿಟ್ ಗಳನ್ನು ಒದಗಿಸುತ್ತಿರುವ ಬೈಂದೂರು ಸುಮುಖ ಸರ್ಜಿಕಲ್ಸ್ ಇಂಡಿಯಾ ಪ್ರೈ ಲಿಮಿಟೆಡ್ ಸಂಸ್ಥೆಗೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ ನೀಡಿದರು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ನಿರಂತರವಾಗಿ ಪಿಪಿಇ ಕಿಟ್ ಹಾಗೂ ಇತರ ವೈದ್ಯಕೀಯ ಕಿಟ್ಗಳನ್ನು ಧಾತ್ರಿ ಬ್ರ್ಯಾಂಡ್ನಲ್ಲಿ ಉತ್ಪಾದಿಸಿ ಜಿಲ್ಲೆಯ ಎಲ್ಲಾ ಸರ್ಕಾರೀ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಉತ್ಪಾದನಾ ಘಟಕವನ್ನು ಡಿಸಿ ಪರಿಶೀಲಿಸಿದರು.
ಈ ಸಂದರ್ಭ ಸುಮುಖ ಸರ್ಜಿಕಲ್ಸ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಬಿ.ಎಸ್.ಸುರೇಶ್ ಶೆಟ್ಟಿ ಹಾಗೂ ಡೈರೆಕ್ಟರ್ ಯು. ಪಾಂಡುರಂಗ ಪಡಿಯಾರ್ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
Advertisement. Scroll to continue reading.