ಬ್ರಹ್ಮಾವರ: ಹಂದಾಡಿ ಗ್ರಾಮದ ಬೆಣ್ಣೆಕುದ್ರುವಿಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ರವರು ಕೋವಿಡ್ ಪಾಸಿಟಿವ್ ಇರುವ ಮನೆಗೆ ಶನಿವಾರ ಭೇಟಿ ನೀಡಿ ಆರೋಗ್ಯದ ಬಗ್ಗೆ ವಿಚಾರಿಸಿ ಧೈರ್ಯ ತುಂಬಿದರು. ಮನೆಯಲ್ಲಿ ಇರುವ ಇತರ ಸದಸ್ಯರಿಗೆ ಜಾಗ್ರತೆ ವಹಿಸುವಂತೆ ತಿಳಿಸಿದರು.
ವಾಹನ ಸವಾರರಿಗೆ ಎಚ್ಚರಿಕೆ
ಬ್ರಹ್ಮಾವರ ಬಸ್ ನಿಲ್ದಾಣ ಮತ್ತು ಬಾರ್ಕೂರಿನಲ್ಲಿ ಓಡಾಡುತ್ತಿದ್ದ ದ್ವಿಚಕ್ರ ಹಾಗೂ ಇತರ ವಾಹನಗಳನ್ನು ತಪಾಸಣೆ ನಡೆಸಿ ಕಾರಣ ಇಲ್ಲದೆ ಓಡಾಡುತ್ತಿದ್ದ ವಾಹನಗಳನ್ನು ಸೀಜ್ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭ ಬ್ರಹ್ಮಾವರ ತಹಶೀಲ್ದಾರ ಕಿರಣ್ ಗೌರಯ್ಯ . ಪಿಎಸ್‍ಐ ಗುರುನಾಥ್. ಬಿ ಹಾದಿಮನೆ ,ಕಂದಾಯ ನೀರೀಕ್ಷಕ ಲಕ್ಷ್ಮೀ ನಾರಾಯಣ ಭಟ್, ಗ್ರಾಮ ಲೆಕ್ಕಿಗರಾದ ಐರಿನ್ ಶಾಂತಿ ಪಿರೇರಾ ಜೊತೆಯಲ್ಲಿದ್ದರು.
Advertisement. Scroll to continue reading.