ನವದೆಹಲಿ : ಐಪಿಎಲ್ 2021 ಮುಂದುವರೆಯಲಿದೆ ಎಂದು ಬಿಸಿಸಿಐ ಹೇಳಿದ್ದು ಐಪಿಎಲ್ ಅಭಿಮಾನಿಗಳಿಗೆ ಫುಲ್ ಖುಷಿಯಾಗಿದೆ. ಐಪಿಎಲ್ ಆಟಗಾರರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಹಾಗಾಗಿ ಐಪಿಎಲ್ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಸೆಪ್ಟಂಬರ್ ಮೂರನೇ ವಾರದಲ್ಲಿ ಯುಎಇ ಯಲ್ಲಿ ಐಪಿಎಲ್ ಆರಂಭಗೊಳ್ಳಲಿದೆ ಎನ್ನಲಾಗಿದೆ.
ಇದುವರೆಗೆ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನೂ 31 ಪಂದ್ಯಗಳು ಬಾಕಿ ಉಳಿದಿವೆ. 2020ರಲ್ಲಿ ಯುಎಯಯಲ್ಲಿ ಐಪಿಎಲ್ ಯಶಸ್ವಿಯಾಗಿ ನಡೆದಿತ್ತು. ಇದೀಗ ಮತ್ತೆ ಅಲ್ಲೇ ಪಂದ್ಯಗಳು ನಡೆಯಲಿದೆ. ಸೆಪ್ಟಂಬರ್ 18 ಅಥವಾ 19 ರಂದು ಆರಂಭಗೊಳ್ಳಲಿದ್ದು ಅಕ್ಟೋಬರ್ 9 ಅಥವಾ 10 ರಂದು ಫೈನಲ್ ಪಂದ್ಯ ನಡೆಯಲಿದೆ.
ಆಟಗಾರರಲ್ಲಿ ಕೊರೋನಾ ಸೋಂಕು
ಐಪಿಎಲ್ ನ ಬಯೋಬಬಲ್ ನಲ್ಲಿ ನೈಟ್ ರೈಡರ್ಸ್ ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ, ಸನ್ ರೈಸರ್ಸ್ ಹೈದರಾಬಾದ್ ನ ವೃದ್ಧಿಮಾನ್ ಸಾಹ, ಡೆಲ್ಲಿ ಕ್ಯಾಪಿಟಲ್ಸ್ ನ ಅಮಿತ್ ಮಿಶ್ರಾ ರವರಿಗೆ ಕೊರೋನಾ ಸೋಂಕು ತಗುಲಿತ್ತು. ಹಾಗಾಗಿ 2021 ರ ಐಪಿಎಲ್ ನ್ನು ಮೇ 4 ರಂದು ರದ್ದುಪಡಿಸಲಾಗಿತ್ತು.
Advertisement. Scroll to continue reading.