Uncategorized

ಉಚ್ಚಿಲ : “ಬ್ಲೂ ರೆಯ್ಸ್ ಹೆಲ್ಪಿಂಗ್ ಟೀಮ್ ಉಚ್ಚಿಲ” ಇದರ ಆಶ್ರಯದಲ್ಲಿ ಆಹಾರ ಸಾಮಾಗ್ರಿ ವಿತರಣೆ

0

ವರದಿ: ಶಫೀ ಉಚ್ಚಿಲ

ಪಡುಬಿದ್ರಿ : ಬ್ಲೂ ರೆಯ್ಸ್ ಹೆಲ್ಪಿಂಗ್ ಟೀಮ್ ಉಚ್ಚಿಲ ಇದರ ಆಶ್ರಯದಲ್ಲಿ ದಾನಿಗಳ ಸಹಕಾರದಿಂದ ಆರ್ಹ ಬಡ ಹಾಗು ಮಧ್ಯಮ ವರ್ಗದ ಕುಟುಂಬಗಳಿಗೆ ಆಹಾರ ಸಾಮಾಗ್ರಿ ವಿತರಣಾ ಕಾರ್ಯಕ್ರಮಕ್ಕೆ ಉಚ್ಚಿಲ ಬಡಾ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಗಣೇಶ್ ಗುರುವಾರ ಚಾಲನೆ ನೀಡಿದರು.

ಕೊರೊನಾ ಎರಡನೇ ಅಲೆಯ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಅರ್ಥಿಕವಾಗಿ ಸಂಕಷ್ಟಕ್ಕೀಡಾದ ಹಿನ್ನೆಲೆ ಬ್ಯೂ ರೆಯ್ಸ್ ಹೆಲ್ಪಿಂಗ್ ತಂಡದ ನಿಸಾರ್ ಮುಲ್ಕಿ,ಅಬ್ದುಲ್ ರಝಾಕ್ ಮುಡಿಪು,ಅನ್ವರ್ ಕೋಟೇಶ್ವರ,ಹನೀಫ್ ಕಂಚಿನಡ್ಕ ಹಾಗು ರಝಾಕ್ ಕರೀಂ ಇವರ ನೇತ್ರತ್ವದಲ್ಲಿ ಕಳೆದ 26 ದಿನಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನ ಚಾಲಕರು ಹಾಗು ದಾರಿಹೋಕರಿಗೆ ಅನ್ನ ನೀಡಿ ಹಸಿವು ನೀಗಿಸಿರುವುದು ಇಲ್ಲಿ ಸ್ಮರಿಸಬಹುದು.

Advertisement. Scroll to continue reading.

ಇದೀಗ ಎರಡನೇ ಹಂತವಾಗಿ ಆರ್ಹ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಗುರುವಾರ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಅಬ್ದುಲ್ ಮಜೀದ್ ಪೊಲ್ಯ ಮಾತನಾಡಿ, ಸಂಸ್ಥೆಯ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸೈಯದ್ ಅರಬೀ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಇಬ್ರಾಹಿಂ ತವಕ್ಕಲ್,ಗ್ರಾ.ಪಂ ಸದಸ್ಯ ಆಸೀಫ್ ವೈ.ಸಿ,ಉದ್ಯಮಿ ಮಾವೀಝ್ ಇಬ್ರಾಹಿಂ,ತವಕ್ಕಲ್ ಯಂಗ್ ಮೆನ್ ಅಸೋಸಿಯೇಷನ್ ಉಚ್ಚಿಲ ಇದರ ಗೌರವಾಧ್ಯಕ್ಷ ಶರೀಫ್ ಕರೀಂ ಉಪಸ್ಥಿತರಿದ್ದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com