ವಿಜಯನಗರ : ಮಹಿಳೆಯೊಬ್ಬರು 9 ಬೆರಳುಗಳುಳ್ಳ ಜನ್ಮವಿತ್ತಿರುವ ಘಟನೆ ಹೊಸಪೇಟೆ ನಗರದಲ್ಲಿ ನಡೆದಿದೆ. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಿದ್ದು, ಸಿಜರೀನ್ ಮಾಡುವ ಮೂಲಕ ಹೆರಿಗೆ ಮಾಡಿಸಲಾಗಿದೆ. ಮಗುವಿಗೆ ಎಡಗಾಲಿನಲ್ಲಿ ಒಂಭತ್ತು ಬೆರಳುಗಳಿವೆ. ಆದರೆ, ಬಲಗಾಲಿನಲ್ಲಿ ಐದು ಬೆರಳುಗಳಿವೆ. ಇದು ತೀರಾ ಅಪರೂಪದ ಘಟನೆಯಾಗಿದೆ. ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.