ವರದಿ: ಶಫೀ ಉಚ್ಚಿಲ
ಕಾಪು : ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಕಂಚಿನಡ್ಕ ಹಾಗು ಸಮಾಜ ಸೇವಕ ಆಸೀಫ್ ಆಪತ್ಬಾಂಧವ ಇವರ ಸಹಭಾಗಿತ್ವದಲ್ಲಿ ಕೊರೊನಾ ಸೋಂಕಿತರ ಸೇವೆಗೆ ಸಜ್ಜುಗೊಳಿಸಿದ ಆಂಬುಲೆನ್ಸ್
ಸೋಮವಾರ ಪಡುಬಿದ್ರಿಯ ಕಂಚಿನಡ್ಕದಲ್ಲಿ ಲೋಕಾರ್ಪಣೆಗೊಂಡಿತು.
ಪಡುಬಿದ್ರಿ ಕೇಂದ್ರ ಜುಮ್ಮಾ ಮಸೀದಿಯ ಖತೀಬರಾದ ಅಬ್ದುಲ್ ರಹಿಮಾನ್ ಮದನಿ ದುವಾ ನೆರವೇರಿಸಿ ಆ್ಯಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ರಾಜೇಶ್ವರಿ ಕಿಣಿ ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮಾತುಗಳನ್ನಾಡಿದರು.
ಆಂಬುಲೆನ್ಸ್ ಕೊಡುಗೆಯಾಗಿ ನೀಡಿದ ಮೈಮುನಾ ಪೌಂಡೇಶನ್ ಸಂಸ್ಥೆಯ ಸ್ಥಾಪಕ ಆಪತ್ಬಾಂಧವ ಆಸಿಫ್,ಮಾತನಾಡಿ, “ಮಾನುಕುಲವನ್ನು ಗೌರವಿಸುವ ಸಮಯ ಇದಾಗಿದ್ದು,ಸೋಂಕಿತರಿಗೆ ಉಚಿತವಾಗಿ ಆಂಬುಲೆನ್ಸ್ ಸೇವೆ ನೀಡಲಿದೆ.ಅಗತ್ಯ ಸಂದರ್ಭದಲ್ಲಿ ಮತ್ತೊಂದು ಆಂಬುಲೆನ್ಸ್ ಸೇವೆಗೆ ಸಿದ್ಧವಿದೆ ಎಂದರು. ಪಡುಬಿದ್ರಿ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಕೆ. ಮಯ್ಯದ್ದಿ, ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ,ಸದಸ್ಯರಾದ ಫಿರೋಝ್, ಮುಸ್ಲಿಂ ವೆಲ್ಫೇರ್ ಅಧ್ಯಕ್ಷ ಇಸ್ಮಾಯಿಲ್ ಕಂಚಿನಡ್ಕ, ಉಪಾಧ್ಯಕ್ಷ ಯೂಸುಫ್ ಕಂಚಿನಡ್ಕ, ನಜೀರ್ ಕಂಚಿನಡ್ಕ, ಕಾರ್ಯದರ್ಶಿ ಸಫ್ವಾನ್ ಉಪಸ್ಥಿತರಿದ್ದರು. ರಝಾಕ್ ಕಂಚಿನಡ್ಕ ಕಾರ್ಯಕ್ರಮ ನಿರೂಪಿಸಿದರು.
Advertisement. Scroll to continue reading.