ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ನಾಲ್ಕು ವರ್ಷದ ಕಾಡೆಮ್ಮೆಯನ್ನು ಬಂದೂಕಿನಿಂದ ಫೈಯರ್ ಮಾಡಿ ಕೊಂದಿರುವ ಘಟನೆ ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ದೊಡ್ಡಬೆಳ್ಳಾರ್ ಎಂಬಲ್ಲಿ ರವಿವಾರ ರಾತ್ರಿ ಘಟನೆ ನಡೆದಿದ್ದು ಸೋಮವಾರ ಮುಂಜಾನೆ ಸ್ಥಳೀಯರ ಗಮನಕ್ಕೆ ಬಂದಿದೆ. ಸ್ಥಳೀಯರು ಶಂಕರನಾರಾಯಣ ಅರಣ್ಯ ಇಲಾಖೆಗೆ ಹಾಗೂ ಹೆಂಗವಳ್ಳಿ ಗ್ರಾಮ ಪಂಚಾಯತಿಗೆ ಮಾಹಿತಿಯನ್ನು ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಕಾಡೆಮ್ಮೆಯನ್ನು ಪೋಸ್ಟ್ ಮಾರ್ಟಂ ಮಾಡಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್, ಶಂಕರನಾರಾಯಣ ವಲಯ ಅರಣ್ಯಧಿಕಾರಿ ಚಿದಾನಂದಪ್ಪ, ಹೆಂಗವಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ರಘುರಾಮ್ ಶೆಟ್ಟಿ ತೊಂಬತ್ತು ಹಾಗೂ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
Advertisement. Scroll to continue reading.