ಕರಾವಳಿ

ಕೊನೆ ಕ್ಷಣದಲ್ಲಿ ಹೆಬ್ರಿ ಗ್ರಾ.ಪಂ.ನ್ನು ಸಂಪೂರ್ಣ ಸೀಲ್ ಡೌನ್ ನಿಂದ ಕೈಬಿಟ್ಟ ತಾಲೂಕಾಡಳಿತ

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಕೊನೆ ಕ್ಷಣದಲ್ಲಿ ಹೆಬ್ರಿ ಗ್ರಾಮವನ್ನು ಸಂಪೂರ್ಣ ಸಿಲ್ ಡೌನ್ ನಿಂದ ಕೈಬಿಡಲಾಗಿದೆ.ನಿನ್ನೆ ಸಂಜೆ 7ಗಂಟೆ ನಂತರ ಹೆಬ್ರಿ ಗ್ರಾಮ ಸೇರಿದಂತೆ ತಾಲ್ಲೂಕಿನ 3 ಗ್ರಾಮಗಳನ್ನು ಸಂಪೂರ್ಣ ಸೀಲ್ ಡೌನ್ ಆಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು .

ಬೆಳಿಗ್ಗೆ ಹೆಬ್ರಿಯ ತಾಲ್ಲೂಕು ಆಡಳಿತ ಅಧಿಕೃತವಾಗಿ ಹೊರಡಿಸಿದ ಆದೇಶದ ಪ್ರತಿಯಲ್ಲಿ ಹೆಬ್ರಿ ಹೆಸರು ಇತ್ತು. ಇವತ್ತು ಬೆಳಿಗ್ಗೆ ಹೆಬ್ರಿ ಗ್ರಾಮ ಪಂಚಾಯತ್ ಧ್ವನಿವರ್ಧಕಗಳಲ್ಲಿ ಹೆಬ್ರಿ ಗ್ರಾಮ ನಾಳೆ ಬೆಳಿಗ್ಗೆಯಿಂದ ಜೂನ್ ಏಳರವರೆಗೆ ಸಂಪೂರ್ಣ ಸೀಲ್ ಡೌನ್ ಆಗಲಿದೆಯೆಂದು ಪ್ರಚಾರ ಮಾಡಿತ್ತು.ಮಧ್ಯಾಹ್ನ ಅದಕ್ಕೆ ಪುಷ್ಟಿ ನೀಡುವಂತೆ ಉಡುಪಿ ಜಿಲ್ಲಾಧಿಕಾರಿಗಳು ಹೆಬ್ರಿಗೆ ಭೇಟಿ ನೀಡಿ ತಾಲ್ಲೂಕು ಕಚೇರಿಯಲ್ಲಿ ಸಭೆ ನಡೆಸಿದರು.

Advertisement. Scroll to continue reading.

ಸೀಲ್ಡೌನ್ ಭೀತಿ; ಖರೀದಿಗೆ ಬಿದ್ದ ಜನ

ಹೆಬ್ರಿ ಜನತೆ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಬಂದ ವರದಿಯನ್ನು ನೋಡಿ ಇಂದು ಬೆಳಿಗ್ಗೆ 1ವಾರಕ್ಕಾಗುವಷ್ಟು ದಿನಬಳಕೆ ವಸ್ತುಗಳನ್ನು ಸಾಮಾಜಿಕ ಅಂತರವಿಲ್ಲದೆ, ಮುಗಿಬಿದ್ದು ವಸ್ತುಗಳನ್ನು ಖರೀದಿ ಮಾಡಿದ್ದರು. ಆದರೆ ಈಗ ಅಧಿಕಾರಿಗಳ ಗೊಂದಲದ ಆದೇಶದಿಂದ ಕೊನೇ ಕ್ಷಣದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ತಾಲ್ಲೂಕಾಡಳಿತ ಹೆಬ್ರಿಯನ್ನು ಸಿಲ್ ಡೌನ್ ನಿಂದ ಕೈಬಿಟ್ಟಿದೆ. ಇದರಿಂದ ಜನರು ಒಂದಿಷ್ಟು ಗೊಂದಲ ಗೀಡಾಗಿದ್ದು, ಈಗ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ .

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com