ವರದಿ : ಬಿ.ಎಸ್.ಆಚಾರ್ಯ
ಕಾರ್ಕಳ : ನಿಟ್ಟೆ ಗ್ರಾಮ ಪಂಚಾಯತ್ ಪರಿಸರದಲ್ಲಿ ಅಸಾಹಯಕ ಪರಿಸ್ಥಿಯಲ್ಲಿದ್ದ ಮಕ್ಕಳ ತಂದೆ ಹಾಗೂ ೩ ಗಂಡು ಮಕ್ಕಳು ೧ ಹೆಣ್ಣು ಮಗು ಸೇರಿ ೪ ಮಕ್ಕಳನ್ನು ರಕ್ಷಿಸಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಕಾರ್ಕಳದ ಸಮಾಜ ಸೇವಕಿ ರಮಿತಾ ಶೈಲೇಂದ್ರ ರವರು ಕರೆ ಮಾಡಿ ಮನವಿ ಮಾಡಿದ್ದರು. ತಕ್ಷಣ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಾಯಿ ಇಲ್ಲದ ಮಕ್ಕಳ ರಕ್ಷಿಸಲು ಮುಂದಾಗಿದ್ದು, ಹರಕಲು ಸ್ಥಿತಿಯಲ್ಲಿದ್ದ ಮನೆಗೆ ಭೇಟಿ ನೀಡಲಾಯಿತು . ತಂದೆಯು ಅನಾರೋಗ್ಯದಿಂದ ಬಳಲುತ್ತಿದ್ದು, ಮಕ್ಕಳ ಸ್ಥಿತಿ ನೋಡಿ ತಕ್ಷಣ ಇಲಾಖೆ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರೋನಾಲ್ಡ್ ಫುರ್ಟಾಡೋ ರವರ ಆದೇಶದಂತೆ ೪ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ .
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ್ ನಾಯ್ಕ್ , ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ , ರಕ್ಷಣಾಧಿಕಾರಿ ಮಹೇಶ್ ದೇವಾಡಿಗ , ಕಾರ್ಕಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ , ಕಾರ್ಕಳ ಗ್ರಾಮಾಂತರ ಠಾಣಾ ಉಪ ನಿರೀಕ್ಷಕರಾದ ತೇಜಸ್ವಿ. ಟಿ .ಹೆಡ್ ಕಾನ್ಸ್ಟೆಬಲ್ ಸತೀಶ್ ನಾಯ್ಕ್, ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ , ಸದಸ್ಯರುಗಳಾದ ಪ್ರವೀಣ್ ಕೋಟ್ಯಾನ್, ಆತ್ಮನಂದ್ ಪೂಜಾರಿ , ಸಮಾಜ ಸೇವಕರಾದ ರಮಿತಾ ಶೈಲೇಂದ್ರ , ಹರ್ಷವರ್ಧನ್ ನಿಟ್ಟೆ ಭಾಗವಹಿಸಿದ್ದರು.
Advertisement. Scroll to continue reading.