ಕೋವಿಡ್ ಸಾಂಕ್ರಾಮಿಕ ಸೋಂಕನ್ನು ನಿವಾರಿಸಲು, ಸಕ್ರಿಯ ಮತ್ತು ಹೊಸಪ್ರಕರಣಗಳು ಇಳಿಕೆಯಾಗಿದ್ದರೂ, ಆರೋಗ್ಯ ಪರಿಣಿತರ ಸಲಹೆ ಮೇರೆಗೆ ಜೂ.14 ರ ವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
500 ಕೋ.ರೂ ಪರಿಹಾರ ಘೋಷಣೆ
ನೇಕಾರರಿಗೆ, ಚಲನಚಿತ್ರ, ದೂರದರ್ಶನ ಮಾಧ್ಯಮದ ಅಸಂಘಟಿತ ನೋಂದಾಯಿತ ಕಾರ್ಮಿಕರಿಗೆ, ನೋಂದಾಯಿತ ಮೀನುಗಾರರಿಗೆ, ಮುಜರಾಯಿ ದೇವಸ್ಥಾನದ ಅರ್ಚಕರು, ಅಡುಗೆ ಕೆಲಸಗಾರರಿಗೆ, ಸಿಬ್ಬಂದಿಗಳಿಗೆ, ಮಸೀದಿ ಇಮಾಮ್ ಗಳಿಗೆ, ಪವರ್ ಲೂಮ್ ಕಾರ್ಮಿಕರಿಗೆ, ಆಶಾ ಕಾರ್ಯಕರ್ತೆ ಯರಿಗೆ ತಲಾ 3000 ರೂ. ಪರಿಹಾರ ಘೋಷಿಸಲಾಗಿದೆ.
ಅಂಗನವಾಡಿ ಕಾರ್ಯಕರ್ತರಿಗೆ, ಸಹಾಯಕರಿಗೆ ತಲಾ 2,000 ರೂ ನೀಡಲಾಗುವುದು.
ಶಾಲಾ ಮಕ್ಕಳಿಗೆ ಆಹಾರ ಧಾನ್ಯಗಳೊಂದಿಗೆ ಹೆಚ್ಚುವರಿಯಾಗಿ ಅರ್ಧ ಕೆ.ಜಿ. ಹಾಲಿನ ಪುಡಿಯನ್ನು ಜೂನ್ ಮತ್ತು ಜುಲೈ ತಿಂಗಳಲ್ಲಿ ವಿತರಣೆ ಮಾಡಲಾಗುವುದು.
ಅನುದಾನ ರಹಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಲಾ 5000 ರೂ. ಪರಿಹಾರ ನೀಡಲಾಗುವುದು.
ಕೈಗಾರಿಕೆಗಳಿಗೆ ವಿದ್ಯುತ್ ಶುಲ್ಕ ಪಾವತಿಸಲು ವಿನಾಯಿತಿ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
Advertisement. Scroll to continue reading.