ಚಂದನವನ : ಹಿರಿಯ ನಟಿ, ಹಾಸ್ಯ ಕಲಾವಿದೆ ಬಿ.ಜಯಾ ವಿಧಿವಶರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಆರು ದಶಕಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ಅವರು, 1958 ರಲ್ಲಿ ಬಂದಿದ್ದ ‘ಭಕ್ತ ಪ್ರಹ್ಲಾದ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಉದಯ್ ಕುಮಾರ್, ಅಂಬರೀಶ್ ಮೊದಲಾದವರ ಸಿನಿಮಾಗಳಲ್ಲಿ ಬಿ.ಜಯಾ ಪಾತ್ರವಾಗಿದ್ದಾರೆ. ಒಟ್ಟು 300 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯ ಕಲಾವಿದೆಯಾಗಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದ್ವಾರಕೀಶ್, ನರಸಿಂಹ ರಾಜು, ಬಾಲಕೃಷ್ಣ ರ ಜೊತೆ ಸಹಕಲಾವಿದೆಯಾಗಿ ಕಾಣಿಸಿಕೊಂಡು ಜನಪ್ರಿಯರಾಗಿದ್ದರು.
Advertisement. Scroll to continue reading.