ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಪೊಲೀಸ್ ಇಲಾಖೆಯೊಂದಿಗೆ ಅಲ್ಪ ಗೌರವಧನಕ್ಕೆ ದುಡಿಯುವ ಗ್ರಹ ರಕ್ಷಕ ದಳದ ಸಿಬ್ಬಂದಿಗಳ ಕುರಿತು ಮಾಡಲಾದ ದಿಕ್ಸೂಚಿ ನ್ಯೂಸ್ ವರದಿ ಬಿಗ್ ಇಂಪ್ಯಾಕ್ಟ್ ಬೀರಿದೆ. ಅಲ್ಪ ಭತ್ಯೆಯೊಂದಿಗೆ ಹಗಲಿರುಳು ಪೊಲೀಸರೊಂದಿಗೆ ಗೃಹರಕ್ಷಕ ದಳದ ಸಿಬ್ಬಂದಿ ದುಡಿಯುವುದರ ಬಗ್ಗೆ ದಿಕ್ಸೂಚಿ ನ್ಯೂಸ್ ವರದಿ ಮಾಡಿತ್ತು.
ಗ್ರಹರಕ್ಷಕ ದಳದ ಸಿಬ್ಬಂದಿಗಳ ಕಷ್ಟಗಳ ಕುರಿತು ಮನ ಮುಟ್ಟುವಂತೆ ತೆರೆದಿಟ್ಟ ದಿಕ್ಸೂಚಿ ವರದಿಗೆ ಬ್ರಹ್ಮಾವರದ ಸಾಮಾಜಿಕ ಮುಖಂಡರಾದ ಬಿರ್ತಿ ರಾಜೇಶ್ ಶೆಟ್ಟಿ ಮತ್ತು ಅವರ ಸ್ನೇಹ ಬಳಗ ಕೂಡಲೆ ಸ್ಪಂದಿಸಿದ್ದಾರೆ.
Advertisement. Scroll to continue reading.
ಬ್ರಹ್ಮಾವರದಲ್ಲಿ ಕೆಲಸ ನಿರ್ವಹಿಸುವ 14 ಮಂದಿಗೆ ತಲಾ 2 ಸಾವಿರದಂತೆ ಬ್ರಹ್ಮಾವರ ಪಿ ಎಸ್ ಐ ಗುರುನಾಥ್ ಬಿ.ಹಾದಿಮನೆಯವರ ಮೂಲಕ ಪ್ರತಿಯೊಬ್ಬರಿಗೂ ತಲಾ ಎರಡು ಸಾವಿರದಂತೆ ಹಣ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಹೋಂ ಗಾರ್ಡ್ ಕಮಾಂಡೆಂಡ್ ಸ್ಟೀವನ್ ಪ್ರಕಾಶ್, ಠಾಣಾ ಸಿಬ್ಬಂದಿಗಳು ಗ್ರಹ ರಕ್ಷಕ ದಳದ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement. Scroll to continue reading.