ಕರಾವಳಿ

ಕರೋನಾ ಸಂಕಷ್ಟ: ಟೂರಿಸ್ಟ್ ಕಾರು ಚಾಲಕನಿಂದ ಕಾರಿನಲ್ಲಿ ತರಕಾರಿ ವ್ಯಾಪಾರ

0

ವರದಿ : ಶಫೀ ಉಚ್ಚಿಲ

ಪಡುಬಿದ್ರಿ: ಕೊರೊನಾ ಸಂಕಷ್ಟ ಯಾರನ್ನೂ ಬಿಟ್ಟಿಲ್ಲ. ದಿನಕಳೆದಂತೆ ಜನ ಕುಟುಂಬದ ಹೊಟ್ಟೆ ತುಂಬಲು ಒಂದಲ್ಲಾ ಒಂದು ರೀತಿಯ ದುಡಿಮೆಗೆ ಪ್ರಯತ್ನಿಸುತ್ತಿರುವುದು ಲಾಕ್ಡೌನ್ ಸಂದಿಗ್ಧ ಪರಿಸ್ಥಿತಿಯಲ್ಲಿ ಕಂಡುಬರುತ್ತಿವೆ.

ಅದರಂತೆ ಟೂರಿಸ್ಟ್ ಕಾರು ಚಾಲಕನೊರ್ವ ದಿಕ್ಕುತೋಚದೆ ತನ್ನ ಕಾರಿನಲ್ಲಿ ತರಕಾರಿ ತುಂಬಿಕೊಂಡು ವ್ಯಾಪಾರಕ್ಕಿಳಿದ ದೃಶ್ಯ ಉಚ್ಚಿಲದಲ್ಲಿ ಕಾಣ ಸಿಕ್ಕಿದೆ. ಉಚ್ಚಿಲ ಪೊಲ್ಯ ನಿವಾಸಿಯೊರ್ವರು ಹಲವಾರು ವರುಷಗಳಿಂದ ಬಾಡಿಗೆ ಕಾರು ಚಲಾಯಿಸಿ ತಮ್ಮ ಸಂಸಾರವನ್ನು ಸಾಗಿಸುತ್ತಿದ್ದರು.ಕೊರೊನಾ ಲಾಕ್ಡೌನ್ ಪರಿಣಾಮ ಬೇರೆ ಪರ್ಯಾಯ ವ್ಯವಸ್ಥೆ ಇಲ್ಲದೆ ತರಕಾರಿ ವ್ಯಾಪಾರದ ಹಾದಿ ಹಿಡಿದಿದ್ದಾರೆ.ಕಾರಿನ ಹಿಂಬದಿಯ ಡಿಕ್ಕಿಯಲ್ಲಿ ಸೊಪ್ಪು ತರಕಾರಿ ಮತ್ತಿತರ ವಸ್ತುಗಳನ್ನು ಇಟ್ಟು, ಬೆಳಿಗ್ಗಿಂದ ಸಂಜೆಯವರೆಗೆ ವ್ಯಾಪಾರ ಮಾಡುತ್ತಿದ್ದಾರೆ.ಇವರಿಗೆ ಗ್ರಾಹಕರು ಕೂಡ ಸಾಥ್ ನೀಡಿದ್ದಾರೆ.ಇದೀಗ ತರಕಾರಿ ಮಾರಾಟದಿಂದ ಕುಟುಂಬ ನಿರ್ವಹಣೆ ಮಾಡಿ ಅಲ್ಪ ಸ್ವಲ್ಪ ಲಾಭ ಗಳಿಸುತ್ತಿದ್ದೇನೆ ಎಂದರು.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com