ವರದಿ: ಶಫೀ ಉಚ್ಚಿಲ
ಪಡುಬಿದ್ರಿ : ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯ ಸೇನಾನಿಗಳಾಗಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಮಾಜಿಕವಾಗಿ ಧೈರ್ಯ ತುಂಬುವ ಪ್ನಯತ್ನಗಳಾಗಬೇಕು ಎಂದು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು.
ತೆಂಕ ಎರ್ಮಾಳು ಎಲ್ಲದಡಿಯಲ್ಲಿ ಶಿವಪ್ರಸಾದ್ ಶೆಟ್ಟಿ ಸಹೋದರರು ನೀಡಿರುವ ಸುಮಾರು 60,000ರೂ. ಗಳ ದಿನಸಿ ಸಾಮಾಗ್ರಿಗಳ ಕಿಟ್ಟನ್ನು ತೆಂಕ ಗ್ರಾಮದಲ್ಲಿನ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗುರುವಾರ ವಿತರಿಸಿ ಮಾತನಾಡಿ, ಕರೊನಾ ವಿರುದ್ಧದ ಹೋರಾಟದಲ್ಲಿ ಯಾವುದೇ ಉದಾಸೀನ ಬೇಡ. ಲಾಕ್ಡೌನ್ ವಿಸ್ತರಣೆಯಾಗಬಹುದು. ಇದು ಕಠಿನ ಲಾಕ್ಡೌನ್ ಆಗಿರಲೂಬಹುದಾದ ಸೂಚನೆಗಳನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದರು.
Advertisement. Scroll to continue reading.
ತೆಂಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಸದಸ್ಯ ಮನೋಜ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ತಾಪಂ ಮಾಜಿ ಸದಸ್ಯ ಕೇಶವ ಮೊಲಿ, ಸತೀಶ್ ಸಾಲ್ಯಾನ್, ಶಿವಪ್ರಸಾದ ಶೆಟ್ಟಿ ಎಲ್ಲದಡಿ, ವಿನಯ ಶೆಟ್ಟಿ ಉಪಸ್ಥಿತರಿದ್ದರು.