ನಟಿ, ರೂಪದರ್ಶಿ ಯಾಮಿ ಗೌತಮ್ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಆದಿತ್ಯ ಧಾರ್ ಜೊತೆ ಸರಳವಾಗಿ ವಿವಾಹವಾಗಿದ್ದಾರೆ. ಹಿಂದಿಯ ಉರಿ' ಚಿತ್ರದ ನಿರ್ದೇಶಕ ಆದಿತ್ಯ ಧಾರ್ ಜೊತೆ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮದುವೆಯ ಫೋಟೋ ಹಂಚಿಕೊಂಟಿದ್ದಾರೆ ಯಾಮಿ.
ನಿನ್ನ ಬೆಳಕಲ್ಲಿ ನಾನು ಪ್ರೀತಿಸುವುದ ಕಲಿತೆ – ರೂಮಿ’, ನಮ್ಮ ಕುಟುಂಬದ ಆಶೀರ್ವಾದದೊಂದಿಗೆ ನಾವಿಬ್ಬರೂ ಇಂದು ಮದುವೆಯಾದೆವು. ಬಹಳ ಸರಳವಾದ ಸಮಾರಂಭದಲ್ಲಿ ಕೆಲವೇ ಆಪ್ತೇಷ್ಟರ ಮುಂದೆ ನಮ್ಮ ವಿವಾಹ ಸಂಪನ್ನವಾಯಿತು. ನಾವು ಪ್ರೀತಿ ಮತ್ತು ಸ್ನೇಹದ ಪ್ರಯಾಣವನ್ನು ಪ್ರಾರಂಭಿಸುತ್ತಿರುವ ಈ ಸಮಯದಲ್ಲಿ ನಿಮ್ಮ ಆಶೀರ್ವಾದ ಹಾಗೂ ಶುಭಾಶಯಗಳನ್ನು ನಾವು ಬಯಸುತ್ತೇವೆ” ಎಂದು ಬರೆದುಕೊಂಡಿದ್ದಾರೆ.
ಯಾಮಿ ಗೌತಮ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ಕನ್ನಡ ಸಿನಿಮಾ ಮೂಲಕ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ `ಉಲ್ಲಾಸ-ಉತ್ಸಾಹ’ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಅವರು ನಟಿಸಿದ್ದಾರೆ. ರೂಪದರ್ಶಿಯಾಗಿಯೂ ಜಾಹಿರಾತುಗಳ ಮೂಲಕ ಗಮನ ಸೆಳೆದಿದ್ದಾರೆ. ಆದಿತ್ಯ ಧಾರ್ ಉರಿ ಚಿತ್ರ ನಿರ್ದೇಶಿಸಿದ್ದು, ಹಲವು ಚಿತ್ರಗಳಿಗೆ ಸಂಭಾಷಣೆ, ಸಾಹಿತ್ಯ ಒದಗಿಸಿದ್ದಾರೆ.
Advertisement. Scroll to continue reading.