ಕರಾವಳಿ

ಉಚ್ಚಿಲ : ಬಸ್ಸು ತಂಗುದಾಣ ಬಳಿ ಭೂ ಕುಸಿತ; ಸ್ಥಳೀಯರಲ್ಲಿ ಆತಂಕ, ಬಾವಿ ಇದ್ದ ಬಗ್ಗೆ ಮಾಹಿತಿ ಲಭ್ಯ

0

ವರದಿ : ಶಫೀ ಉಚ್ಚಿಲ

ಕಾಪು : ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಬಸ್ಸು ತಂಗುದಾಣ ಬಳಿ ಕುಸಿತ ಉಂಟಾಗಿದ್ದು, ಸ್ಥಳೀಯರು ಆತಂಕಿತರಾಗಿದ್ದಾರೆ.

ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದ ನೀರಿನ ಒರೆತ ಹೆಚ್ಚಾಗಿ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಡುಪಿ-ಮಂಗಳೂರು ರಾ.ಹೆ 66ರ ಪಕ್ಕದ ಬಸ್ಸು ತಂಗುದಾಣದ ಪಕ್ಕದಲ್ಲೇ
ಸುಮಾರು 5 ಅಡಿ ಸುತ್ತಳತೆ ಹಾಗೂ ಎರಡು ಮೂರು ಅಡಿಯಷ್ಟು ಕುಸಿದಿದ್ದು,ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿತು.ಈ ಬಗ್ಗೆ ಗಮನಿಸದ ದಾರಿ ಹೋಕರು ಆಗಲೇ ಬಿದ್ದಿರುವುದಾಗಿ ತಿಳಿಸಿದ ಸ್ಥಳೀಯರು ರಸ್ತೆ ಕುಸಿದಿರುವುದನ್ನು ಕಂಡು ಆತಂಕ್ಕೀಡಾಗಿದ್ದಾರೆ.ರಾ.ಹೆ ಚತುಷ್ಪಥ ಕಾಮಗಾರಿಗೆ ಮೊದಲು
ಈ ಸ್ಥಳದಲ್ಲಿ ಮನೆ ಮತ್ತು ಸುಮಾರು ನೂರು ವರ್ಷಗಳ ಹಳೆಯದಾದ ಬಾವಿ ಇದ್ದ ಬಗ್ಗೆ ಸ್ಥಳೀಯ ನಿವಾಸಿ ವಾಮನ ಮಾಹಿತಿ ನೀಡಿದ್ದು, ಕೂಡಲೇ ದುರಸ್ತಿ ಪಡಿಸದಿದ್ದಲ್ಲಿ ಅಪಾಯ ತಪ್ಪಿದ್ದಲ್ಲ ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.

Advertisement. Scroll to continue reading.

ಹೆದ್ದಾರಿ ಕಾಮಗಾರಿ ವೇಳೆ ಇಲಾಖೆ ಭೂ ಸ್ವಾಧೀನಗೊಳಿಸಿ ಬಾವಿಗೆ  ಮಣ್ಣು ತುಂಬಲಾಗಿತ್ತು.ಇದೀಗ ಬಾವಿ ಇದ್ದ ಜಾಗದಲ್ಲೇ ಕುಸಿತ ಕಂಡಿದೆ. ಸಮರ್ಪಕವಾಗಿ ಬಾವಿಗೆ ಮಣ್ಣು ತುಂಬದೆ ಇರುವುದೇ ಈ ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.ಸ್ಥಳಕ್ಕೆ ಗ್ರಾ.ಪಂ ಪಿಡಿಒ ಕುಶಾಲಿನಿ ಆಗಮಿಸಿ ಪರಿಶೀಲನೆ ನಡೆಸಿ ಹೆದ್ದಾರಿ ಗುತ್ತಿಗೆದಾರರಿಗೆ ವಿಷಯ ತಿಳಿಸಿದ್ದಾರೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com