ಉಡುಪಿ : ಆಗಸದಲ್ಲಿ ಸೂರ್ಯನ ಸುತ್ತ ಸಂಪೂರ್ಣ ಕಾಮನಬಿಲ್ಲು ಗೋಚರಿಸುತ್ತಿದೆ. ಉಂಗುರಾಕೃತಿಯ ಸೌರ ಪ್ರಭೆ(ಸನ್ ಹ್ಯಾಲೊ) ಗಮನ ಸೆಳೆಯುತ್ತಿದೆ. ಮೋಡದೊಳಗೆ ಇರುವ ಮಂಜುಗಡ್ಡೆಯ ಹರಳುಗಳಿಗೆ ಸೂರ್ಯನ ಕಿರಣಗಳು ಪ್ರತಿಫಲಿಸಿದಾಗ ಉಂಗುರಾಕೃತಿಯ ಸೌರ ಪ್ರಭೆ ಕಂಡು ಬರುತ್ತದೆ. ಸೂರ್ಯನ ಸುತ್ತಲಿನ ತ್ರಿಜ್ಯದಿಂದಾಗಿ ಇದನ್ನು `22 ಡಿಗ್ರಿ ಹ್ಯಾಲೊ’ ಎಂದು ಕರೆಯಲಾಗುತ್ತದೆ.
22-ಡಿಗ್ರಿ ಸೌರಪ್ರಭೆ ಆಪ್ಟಿಕಲ್ ವಿದ್ಯಮಾನವಾಗಿದ್ದು, ಅದು ಮಂಜುಗಡ್ಡೆಯ ಹರಳುಳೆಡಿಯಲ್ಲಿ ಸೂರ್ಯರಶ್ಮಿಯ ಪ್ರತಿಫಲನವಾಗಿದೆ. ಸೂರ್ಯನ ಪ್ರಭಾವಲಯ ಅಥವಾ ಸಾಂದರ್ಭಿಕವಾಗಿ ಚಂದ್ರನನ್ನು (ಚಂದ್ರನ ಉಂಗುರ ಅಥವಾ ಚಳಿಗಾಲದ ಪ್ರಭಾವಲಯ ಎಂದೂ ಕರೆಯುತ್ತಾರೆ), ಸಿರಸ್ ಮೋಡಗಳಲ್ಲಿ (ಚದುರಿರುವ ಕೂದಲಿನಂತಿರುವ ಚಿಕ್ಕ ಮೋಡಗಳು) ಇರುವ ಷಟ್ಬುಜಾಕೃತಿಯ ಹಿಮದ ಹರಳುಗಳ ಮೂಲಕ ಸೂರ್ಯನ ಅಥವಾ ಚಂದ್ರನ ಕಿರಣಗಳು ಹಾಯ್ದು ವಕ್ರೀಭವನಗೊಂಡಾಗ ಇದು ಸಂಭವಿಸುತ್ತದೆ. ಈ ಮೋಡಗಳು ಲಕ್ಷಾಂತರ ಸಣ್ಣ ಮಂಜುಗಡ್ಡೆಯ ಹರಳುಗಳನನು ಒಳಗೊಂಡಿರುತ್ತವೆ. ಇಲ್ಲಿ ಬೆಳಕು ಬೆಳಕನ್ನು ವಕ್ರೀಭವನಕ್ಕೊಳಗಾಗ, ವಿಭಜಿಸಿ ಮತ್ತು ಪ್ರತಿಫಲಿಸುವಾಗ ವೃತ್ತಾಕಾರದ ಮಳೆಬಿಲ್ಲು ರೂಪುಗೊಳ್ಳುತ್ತದೆ.
Advertisement. Scroll to continue reading.