ಬ್ರಹ್ಮಾವರ : ಸಮುದಾಯ ಆರೋಗ್ಯ ಕೇಂದ್ರದ ಲಸಿಕಾ ಕೇಂದ್ರಕ್ಕೆ ಡಿಸಿ ಜಿ. ಜಗದೀಶ್ ಭೇಟಿ ನೀಡಿದರು. ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಆರೋಗ್ಯ ಕೇಂದ್ರದ ಪ್ರತಿಯೊಂದು ವಿಭಾಗಕ್ಕೂ ಭೇಟಿ ನೀಡಿ ಮಾಹಿತಿ ಪಡೆದರು.
ವಾರಂಬಳ್ಳಿ ಗ್ರಾಮ ಪಂಚಾಯತಿ, ಹಂದಾಡಿ ಗ್ರಾಮ ಪಂಚಾಯತಿಗೆ ಇದೇ ವೇಳೆ ಅವರು ಭೇಟಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯ ಸಿಬ್ಬಂದಿಗಳೊಂದಿಗೆ ಕಛೇರಿ ಕೆಲಸದ ಕುರಿತು ಮಾತನಾಡಿ, ಮಾಹಿತಿ ಪಡೆದರು.
ಈ ಸಂದರ್ಭ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ನೀರೀಕ್ಷಕ ಲಕ್ಷ್ಮಿ ನಾರಾಯಣ ಭಟ್, ಬ್ರಹ್ಮಾವರ ಸಮುದಾಯ ಆರೋಗ್ಯ ಕೆಂದ್ರದ ಡಾ ಅಜಿತ್ ಕುಮಾರ್ ಶೆಟ್ಟಿ, ಡಾ ಮಹೇಶ್ ಐತಾಳ, ಡಾ. ಮಹಾಬಲ ಇನ್ನಿತರರು ಉಪಸ್ಥಿತರಿದ್ದರು.
Advertisement. Scroll to continue reading.