ಪಡುಬಿದ್ರಿ: ಸೊಶೀಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಡುಬಿದ್ರೆ ಪಂಚಾಯತ್ ಸಮಿತಿ ವತಿಯಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ಮನೆ ಮನೆಗೆ ತೆರಳಿ ಉಚಿತ ಹಾಲು ವಿತರಿಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಸೊಶೀಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್
ಪ್ರಸ್ತಾವಿಕವಾಗಿ ಮಾತಾನಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸುಮಾರು 400 ಪ್ಯಾಕೆಟ್ ಹಾಲನ್ನು ದೀನ್ ಸ್ಟ್ರೀಟ್ ಮತ್ತು ಕಂಚಿನಡ್ಕ ಪ್ರದೇಶದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಪಿ.ಹಾಜಬ್ಬ ,ದಲಿತ ಮುಖಂಡ ಸುಬ್ಬ ಮೇಸ್ತ್ರಿ,ರಾಜು, ಸಮಾಜ ಸೇವಕರಾದ ಸಸಿ, ಎಸ್.ಡಿ.ಪಿ.ಐ. ಪಡುಬಿದ್ರೆ ಪಂಚಾಯತ್ ಸಮಿತಿ ಅಧ್ಯಕರಾದ ಇಬ್ರಾಹಿಮ್ ಕಂಚಿನಡ್ಕ ,ಪಡುಬಿದ್ರೆ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಅಜೀಜ್, ಫೀರೊಝ್, ಮತ್ತಿತರರು ಉಪಸ್ಥಿತರಿದ್ದರು.
Advertisement. Scroll to continue reading.
ಸೊಶೀಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಡುಬಿದ್ರೆ ಪಂಚಾಯತ್ ಸಮಿತಿ ಸದಸ್ಯ ಅಬ್ದುಲ್ ಅಜೀಜ್ ಸ್ವಾಗತಿಸಿ ವಂದಿಸಿದರು.