ಉಡುಪಿ : ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ; ಆರೋಪಿಗಳಿಗೆ ಜೀವಾವಧಿ ಶಿಕ್ಷೆ
Published
0
ಉಡುಪಿ : ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳಿಗೆ ಜೀವಿತಾವಧಿ ಶಿಕ್ಷೆ ಪ್ರಕಟಗೊಂಡಿದೆ. ಪ್ರಮುಖ ಆರೋಪಿಗಳಾದ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಹಾಗೂ ರಾಜೇಶ್ವರಿ ಶೆಟ್ಟಿ ಪ್ರಿಯಕರ ನಿರಂಜನ ಭಟ್ ನನ್ನು ಜಿಲ್ಲಾ ನ್ಯಾಯಾಲಯ ದೋಷಿಗಳೆಂದು ತೀರ್ಪು ನೀಡಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್. ತೀರ್ಪು ನೀಡಿದೆ. 4 ನೇ ಆರೋಪಿ ನಿರಂಜನ ಭಟ್ ತಂದೆ ಶ್ರೀನಿವಾಸ್ ಭಟ್ ಈಗಾಗಲೇ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. 5 ನೇ ಆರೋಪಿ ಚಾಲಕ ರಾಘವೇಂದ್ರ ಬಿಡುಗಡೆಗೊಂಡಿದ್ದಾರೆ.
ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ , ನಿರಂಜನ ಭಟ್
ಏನಿದು ಪ್ರಕರಣ?
ಅನಿವಾಸಿ ಭಾರತೀಯ ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಜುಲೈ 28, 2016 ರಂದು ಉಡುಪಿಯ ಅವರ ಮನೆಯಲ್ಲಿ ಭೀಕರವಾಗಿ ಹತ್ಯೆಗೈಯಲಾಗಿತ್ತು. ಬಳಿಕ ದೇಹವನ್ನು ಹೋಮ ಕುಂಡದಲ್ಲಿ ಹಾಕಿದ್ದರು. ನಂತರ ಅಸ್ಥಿ ಮತ್ತು ಮೂಳೆಗಳನ್ನು ನದಿ ನೀರಿನಲ್ಲಿ ಹಾಕಿದ್ದರು. ಭಾಸ್ಕರ್ ಶೆಟ್ಟಿ ನಾಪತ್ತೆಯಾಗಿದ್ದಾರೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು, ಭಾಸ್ಕರ್ ಶೆಟ್ಟಿ ಅವರ ಮೂಳೆಗಳನ್ನು ಸಂಗ್ರಹಿಸಿ, ಪತ್ನಿ, ಪುತ್ರನ ಡಿ ಎನ್ ಎ ಪರೀಕ್ಷೆ ನಡೆಸಿದ್ದರು. ಈ ಮೂಲಕ ಕೊಲೆ ಬೆಳಕಿಗೆ ಬಂದಿತ್ತು. ಇದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಘಟನೆಯಾಗಿತ್ತು.