ಉಡುಪಿ : ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಶೇಖರ್ ಪದ್ದು ಬಂಗೇರ ಕೋವಿಡ್ ಗೆ ಬಲಿಯಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೊರೋನಾ ಸೋಂಕು
ತಗುಲಿದ್ದ ಅವರು ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೂಲತಃ ಉಡುಪಿಯ ಬಡಾನಿಡಿಯೂರಿನವರಾದ ಶೇಖರ್
ಭಾರತ ತಂಡದ ಗೋಲ್ ಕೀಪರ್ ಆಗಿದ್ದರು. ಅಲ್ಲದೇ, ಕ್ಯಾಪ್ಟನ್ ಕೂಡ ಆಗಿದ್ದರು. ಬಹುಕಾಲ ಮುಂಬೈಯಲ್ಲಿ ವಾಸವಾಗಿದ್ದರು. ಹಲವು ಪ್ರತಿಷ್ಠಿತ ಕ್ಲಬ್, ಸಂಸ್ಥೆಗಳಲ್ಲಿ ಆಗಿ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಉಡುಪಿಯಲ್ಲಿ ಕೋವಿಡ್ ನಿಯಮಾವಳಿಗಳಂತೆ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿ ಟ್ರಸ್ಟಿಗಳು, ಕ್ಲೈವ್ ನೊಲಾನ್ ಮಸ್ಕರೇನಸ್ ಮತ್ತು ಮಿಲನ ಈ ಸಂದರ್ಭ ಉಪಸ್ಥಿತರಿದ್ದರು.