ಕರಾವಳಿ

ಉಡುಪಿ : ದೈವ ಪರಿಚಾರಕರಿಗೆ ಪರಿಹಾರ ನೀಡುವಂತೆ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದಿಂದ ಡಿಸಿಗೆ ಮನವಿ

0

ಉಡುಪಿ : ದೈವ ಪರಿಚಾರಕರಿಗೆ ಪರಿಹಾರ ನೀಡುವಂತೆ ಉಡುಪಿ ಜಿಲ್ಲಾ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಮನವಿ ಸಲ್ಲಿಸಿದೆ. ಈಗಾಗಲೇ ಮೂರು ಬಾರಿಯ ಕೋವಿಡ್ ಪ್ಯಾಕೇಜಿನಲ್ಲಿ ಸರ್ಕಾರ ನಮ್ಮ ಕರಾವಳಿಯ ದೈವಾರಾಧನೆ ಕ್ಷೇತ್ರದಲ್ಲಿ ದುಡಿಯುವವರಿಗೆ ಈ ಲಾಕ್ ಡೌನ್ ತುರ್ತು ಸಂದರ್ಭದಲ್ಲಿ ಯಾವುದೇ ಪರಿಹಾರ ಒದಗಿಸಿಲ್ಲ. ಎರಡು ವರ್ಷದಿಂದ ಸರಿಯಾಗಿ ಯಾವುದೇ ಪೂಜೆ ಪುರಸ್ಕಾರ, ವಾರ್ಷಿಕ ನೇಮೋತ್ಸವಗಳು, ಯಾವುದೇ ಇತರ ಕಾರ್ಯಗಳು ನಡೆಯುತ್ತಿಲ್ಲ. ಸುಮಾರು ಉಡುಪಿ, ಮಂಗಳೂರಿನಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ದೈವ ಚಾಕ್ರಿ ವರ್ಗದವರಿದ್ದಾರೆ. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಇವರಿಗೆ ಜೀವನ ನಡೆಸಲು ತುಂಬಾ ಸಂಕಷ್ಟಗಳು ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಇವರಿಗೆ ಯಾವುದೇ ಸಂಪಾದನೆ ಇಲ್ಲ. ದೈವಾರಾಧನೆ ಮೂಲ ಕುಲಕಸುಬಾಗಿ ಅವಲಂಬಿಸಿರುವ ಇವರುಗಳ ಸಂಭಾವನೆಯಲ್ಲಿ ಕುಟುಂಬವನ್ನು ಸಾಗಿಸಬೇಕಾಗಿದೆ. ಲಾಕ್ ಡೌನ್ ತೆಗೆದ ನಂತರ ಮುಂದಿನ ದಿನಗಳಲ್ಲಿ 200 ಜನರ ಸೀಮಿತ ಅವಧಿಗೆ ಸರ್ಕಾರದ ಕಟ್ಟುನಿಟ್ಟಾದ ನಿಯಮ ಅನುಸಾರವಾಗಿ ದೈವಾರಾಧನೆಗೆ ಅನುಮತಿ ನೀಡಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದು ವಿನಂತಿಸಲಾಗಿದೆ.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ಡಿಸಿ ಜಗದೀಶ್, ಈ ದಿನವೇ ಮುಖ್ಯಮಂತ್ರಿಗಳಿಗೆ ನಿಮ್ಮ ಬೇಡಿಕೆಗಳ ಮನವಿಯನ್ನು ಕಳುಹಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷ ರವಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಾಧಿಕಾರಿ ಶ್ರೀಧರ್ ಪೂಜಾರಿ, ಕಾರ್ಯದರ್ಶಿ ರವೀಶ್ ಕಾಮತ್, ನವೀನ್ ಉಪಸ್ಥಿತರಿದ್ದರು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com