ಮಂಗಳೂರು ಮೂಲದ ದುಬೈನ ಯಶಸ್ವಿ ಉದ್ಯಮಿ, ಸಮಾಜ ಸೇವಕ ಹಿದಾಯತ್ ಅಡ್ಡೂರು ಅವರು ತಮ್ಮ ಹೊಸ ಯೋಜನೆ `ದ ಪ್ರೆಶ್’ ದುಬೈ, ಶಾರ್ಜಾ, ಅಬುಧಾಬಿಯಲ್ಲಿ ತಾಜಾ ಮೀನು ಚಿಕ್ಕನ್ ಹಾಗು ಮಟನ್ ಮಾಂಸವನ್ನು ಮನೆಯ ಬಳಿಗೆ ಪೂರೈಸುವ ಈ ಕಾಮರ್ಸ್ ಉದ್ಯಮವನ್ನು ಆರಂಭಿಸಿದ್ದಾರೆ. ದುಬೈನ ಉದ್ಯಮಿ, ಅರೇಬಿಯಾ ಹೋಲ್ಡಿಂಗ್ಸ್ ಆ್ಯಂಡ್ ಎಕನಾಮಿಕ್ ಹೋಲ್ಡಿಂಗ್ಸ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ರವೂಫ್ ಆಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಫಾರ್ಚೂನ್ ಗ್ರೂಪ್ ನ ಪ್ರವೀಣ್ ಶೆಟ್ಟಿ ವಕ್ವಾಡಿ, ಉದ್ಯಮಿ, ಕೊಡುಗೈ ದಾನಿ ರೊನಾಲ್ಡ್ ಕೊಲಾಸೋ, ಭಾರತೀಯ ರಾಯಭಾರಿ ಕಛೇರಿಯ ತಾಡು ಮಾಮು ರಶೀದ್ ಹಝಾರಿ, ಅನ್ವರ ನಹ, ರಾಜೇಶ್ ಸಿಕ್ವೇರಾ, ವಲೇರಿಯನ್ ಡಾಲ್ಮೀಡಿಯಾ, ಇಮ್ರಾನ್ ಮೊದಲಾದವರು ಉಪಸ್ಥಿತರಿದ್ದು, ಶುಭ ಹಾರೈಸಿದರು.
ಕಾರ್ಯಕ್ರಮವನ್ನು 92.7 ಬಿಗ್ ಎಫ್ ಎಮ್ ನ ಆರ್ ಜೆ ಎರಾಲ್ ನಿರೂಪಿಸಿದರು. ಇಡೀ ಕಾರ್ಯಕ್ರಮ ಝೂಮ್ ಮೀಟಿಂಗ್ ನ ಮೂಲಕ ನಡೆಯಿತು. ಬೇರೆ ಬೇರೆ ಸ್ಥಳದಿಂದ ಸುಮಾರು 60 ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Advertisement. Scroll to continue reading.