ಹಾಸನ : 2 ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಆನೇಮಹಲ್ ನಲ್ಲಿ ನಡೆದಿದೆ. ಪ್ರಜ್ವಲಾ(26), ಸಾಧ್ವಿ(2) ಮೃತ ದುರ್ದೈವಿಗಳು.
ಮೃತ ಪ್ರಜ್ವಲ ಅವರ ಮೊದಲ ಪತಿ ಸುರೇಂದ್ರ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪೋಷಕರು ಜೂ.16 ರಂದು ಎರಡನೇ ಮದುವೆ ಮಾಡಿದ್ದರು. ಇದರಿಂದ ಮನದೊಂದು ಪ್ರಜ್ವಲಾ ಮಗುವಿಗೆ ನೇಣು ಬಿಗಿದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.