ಕರಾವಳಿ

ಬ್ರಹ್ಮಾವರ : ನಿರ್ಗಮನ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಪತ್ರಕರ್ತರ ಸಂಘದಿಂದ ಸನ್ಮಾನ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಬ್ರಹ್ಮಾವರ ತಾಲೂಕು ತಹಶೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದ ಕಿರಣ್ ಗೌರಯ್ಯ ಅವರು ಬ್ರಹ್ಮಾವರದಿಂದ ವರ್ಗಾವಣೆಗೊಂಡಿದ್ದು, ಅವರ ಸೇವೆಯನ್ನು ಸ್ಮರಿಸಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಸೋಮವಾರ ಸಮ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಮಾತನಾಡಿ, ಕಿರಣ್ ಗೌರಯ್ಯ ಅವರು ಅತ್ಯಂತ ಜನಸ್ನೇಹಿಯಾಗಿ ಬ್ರಹ್ಮಾವರದಲ್ಲಿ ಕಾರ್ಯನಿರ್ವಹಿಸಿದ್ದಾರೆ ಹಾಗೂ ಪತ್ರಕರ್ತರ ಜತೆ ಆತ್ಮೀಯ ಸಂಬಂಧ ಇರಿಸಿಕೊಂಡಿದ್ದರು. ನಮ್ಮ ಸಂಘಕ್ಕೆ ಬ್ರಹ್ಮಾವರದಲ್ಲಿ ನಿವೇಶನವೊಂದನ್ನು ಕಾಯ್ದಿರಿಸುವ ಸಲುವಾಗಿ ಸ್ಥಳ ಗುರುತಿಸುವಿಕೆ, ಕಡತಗಳ ರವಾನೆಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಬ್ರಹ್ಮಾವರ ಪತ್ರಕರ್ತರ ಸಂಘದ ಇತಿಹಾಸದಲ್ಲೇ ವರ್ಗಾವಣೆಗೊಂಡ ಅಧಿಕಾರಿಯನ್ನು ಗೌರವಿಸುತ್ತಿರುವುದು ಇದೇ ಪ್ರಥಮವಾಗಿದ್ದು ಇವರ ಕಾರ್ಯ ದಕ್ಷತೆಯನ್ನು ಇದು ಸೂಚಿಸುತ್ತದೆ ಎಂದರು.

ಈ ಸಂದರ್ಭ ನೂತನವಾಗಿ ಅಧಿಕಾರ ವಹಿಸಿಕೊಂಡ ತಹಶೀಲ್ದಾರ್ ರಾಜಶೇಖರ್‌ಮೂರ್ತಿ ಅವರಿಗೆ ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಈ ವೇಳೆ ಪತ್ರಕರ್ತರ ಸಂಘದ ಖಜಾಂಚಿ ಮೋಹನ್ ಉಡುಪ, ಪದಾಧಿಕಾರಿಗಳಾದ ಚಂದ್ರಶೇಖರ್ ಬೀಜಾಡಿ, ಪ್ರವೀಣ್ ಮುದ್ದೂರು, ಬಂಡೀಮಠ ಶಿವರಾಮ್ ಆಚಾರ್ಯ, ರವೀಂದ್ರ ಕೋಟ, ಪ್ರವೀಣ್ ಬ್ರಹ್ಮಾವರ, ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಗಣೇಶ್ ಸಾಬ್ರಕಟ್ಟೆ ಉಪಸ್ಥಿತರಿದ್ದರು.
ಪತ್ರಕರ್ತರ ಸಂಘದ ಪ್ರಭಾರ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ ಕಾರ್ಯಕ್ರಮ ನಿರೂಪಿಸಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com