ಉಡುಪಿ : ಸರ್ಕಾರ ನಮ್ಮ ಜಿಲ್ಲೆಗೆ ನಿರ್ಬಂಧವನ್ನು ಸಡಿಲಮಾಡಿದೆ, ಆದರೆ ನಮ್ಮ ಜಿಲ್ಲೆಯ ಜನರು ನಿರ್ಬಂಧವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಸರ್ಕಾರ ಎಷ್ಟೇ ಹೇಳಿದರೂ ಕೂಡ ಜನರು ಮಾತ್ರ ಕಾರ್ಯಕ್ರಮಗಳನ್ನು ಮಾಡುತ್ತಲೇ ಇದ್ದಾರೆ. ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ೫೦ ಪರ್ಸೆಂಟ್ ಗಿಂತ ಹೆಚ್ಚು ಜನರು ಪ್ರಯಾಣಿಸುವುದು ಕಂಡು ಬಂದಿದೆ ಹಾಗೂ ಅಲ್ಲಲ್ಲಿ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳು ಕೂಡ ನಡೆಯುತ್ತಿದೆ. ಪ್ರತಿಭಟನೆಗಳು ನಡೆಯುತ್ತಿವೆ. ಇದಕ್ಕೆಲ್ಲ ಯಾರೂ ಅನುಮತಿ ನೀಡಿಲ್ಲ.ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ.ಕಾನೂನು ಎಲ್ಲರಿಗೂ ಒಂದೇ ಆಗಿರವುದರಿಂದ ಎಲ್ಲರೂ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ಡಿಸಿ ಜಗದೀಶ್ ಹೇಳಿದ್ದಾರೆ.
ಕಾರ್ಯಕ್ರಮ ಮಾಡಲು ಅನುಮತಿ ನೀಡಿದರೆ ಮಾತ್ರ ಮಾಡಬೇಕೇ ಹೊರತು, ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ. ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿರುವಂತೆ ಜುಲೈ ತಿಂಗಳ ೭ ತಾರೀಖಿನ ವರೆಗೆ ಯಾವ್ದೇ ಕಾರ್ಯಕ್ರಮಗಳು ನಡೆದಲ್ಲಿ ಅವರ ವಿರುದ್ಧ, ಅವರು ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಕ್ರಮ ಕೈಗೊಳ್ಳುವಂತೆ ಆದೇಶವನ್ನು ಮಾಡಲಾಗಿದೆ ಎಂದರು.
Advertisement. Scroll to continue reading.