ಚಂದನವನ : ಕನ್ನಡ ಹಾಡುಗಳನ್ನು, ಸಿನಿಮಾಗಳನ್ನು ವಿದೇಶಿಗಳು ನೋಡಿ, ಮೆಚ್ಚಿಕೊಳ್ಳುತ್ತಲಿರುತ್ತಾರೆ. ಇದೀಗ ಕೊರಿಯಾ ಯುವತಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ' ಸಿನಿಮಾದ ಹಾಡನ್ನು ಹಾಡಿ ಗಮನ ಸೆಳೆದಿದ್ದಾರೆ. ಹಳದಿ ಬಣ್ಣದ ಕೆಂಪು ಜರಿ ಸೀರೆ ಉಟ್ಟು ಕನ್ನಡ ಹಾಡನ್ನು ಯುವತಿ ಸೊಗಸಾಗಿ ಹಾಡಿದ್ದಾಳೆ. ಯುವತಿಯ ಕನ್ನಡ ಪ್ರೇಮಕ್ಕೆ ಕನ್ನಡಿಗರು ಸಂತಸ ಪಟ್ಟಿದ್ದಾರೆ. ಅಲ್ಲದೇ ಕಮೆಂಟ್ ಬಾಕ್ಸ್ ನಲ್ಲಿ ಆಕೆ, ನನ್ನ ಕನ್ನಡ ಉಚ್ಛಾರಣೆ ಹೇಗಾಗಿದೆಯೋ ಗೊತ್ತಿಲ್ಲ. ತಪ್ಪಿದ್ದರೂ ಅದರ ಹೊರತಾಗಿಯೂ ನೀವು ಇಷ್ಟ ಪಡುತ್ತೀರಿ ಎಂದು ಭಾವಿಸಿದ್ದೇನೆ. ಎಲ್ಲಾ ಭಾರತೀಯ ಭಾಷೆಯ ಹಾಡುಗಳನ್ನು ಒಂದೊಂದಾಗಿ ಮುಂದಿನ ದಿನಗಳಲ್ಲಿ ಹಾಡಲು ಪ್ರಯತ್ನಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯುವತಿಯ ಗಾಯನವನ್ನು ಹೊಗಳಿದ್ದಾರೆ.
ಯುವರತ್ನ ಸಿನಿಮಾ ಏಪ್ರಿಲ್ ತಿಂಗಳಲ್ಲಿ ತೆರಕಂಡಿತ್ತು, ಆದರೆ, ಕೊರೋನಾ ಕಾರಣದಿಂದ ಚಿತ್ರಮಂದಿರ ಮುಚ್ಚಲ್ಪಟ್ಟು ಒಟಿಟಿಯಲ್ಲಿ ಚಿತ್ರ ತೆರೆಕಂಡು ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು. ಪುನೀತ್ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ಈ ಚಿತ್ರಕ್ಕೆ ಎಸ್.ತಮನ್ ಸಂಗೀತ ಸಂಯೋಜಿಸಿದ್ದಾರೆ. ಅರ್ಮಾನ್ ಮಲ್ಲಿಕ್ ಮತ್ತು ಶ್ರೇಯಾ ಘೋಷಾಲ್ನೀನಾದೆನಾ’ ಹಾಡನ್ನು ಹಾಡಿದ್ದಾರೆ.
Advertisement. Scroll to continue reading.