ವರದಿ : ದಿನೇಶ್ ರಾಯಪ್ಪನಮಠ
ಪೆರ್ಡೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ(ರಿ) ಯಲ್ಲಿ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ ಉಡುಪಿ ತಾಲೂಕಿನ ಪೆರ್ಡೂರು ವಲಯದ ಬೆಳ್ಳಂಪಳ್ಳಿ ಒಕ್ಕೂಟದಲ್ಲಿ ನಡೆಯಿತು.
ತಾಲೂಕಿನ ಯೋಜನಾ ಅಧಿಕಾರಿ ರೋಹಿತ್. ಎಚ್. ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ಮೊತ್ತವನ್ನು ವಿತರಿಸಿದರು. ಬಳಿಕ ಮಾತನಾಡಿದ ಅವರು, ಉಡುಪಿ ತಾಲೂಕಿನ ಸ್ವಸಹಾಯ ಸಂಘಗಳಿಗೆ ಒಟ್ಟು 13 ಕೋಟಿ ರೂಪಾಯಿಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ನ ಅಧ್ಯಕ್ಷ ಪುರಂದರ ಕೋಟ್ಯಾನ್ ವಹಿಸಿದ್ದರು.
ಈ ಸಂದರ್ಭ ಉಡುಪಿ ಜಿಲ್ಲಾ ಜನ ಜಾಗೃತಿ ವೇದಿಕೆಯ ಕಿರಣ್ ಕುಮಾರ್ ಹೆಗ್ಡೆ,ವಲಯ ಅಧ್ಯಕ್ಷರಾದ ಶಮಿತಾ.ಪಿ.ಶೆಟ್ಟಿ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಸುಧಾಕರ ನಾಯ್ಕ ಸ್ವಾಗತಿಸಿ, ರಮಣಿ.ಎಂ ವಂದಿಸಿದರು. ಮೇಲ್ವಿಚಾರಕ ರಾಗಿರುವ ಸುಧೀರ್ ಹಂಗಳೂರು ನಿರೂಪಿದರು.
Advertisement. Scroll to continue reading.