Uncategorized

ಸಂಪ್ರದಾಯ ಮೀರಿ ಪತಿಯ ಅಂತ್ಯಕ್ರಿಯೆ ನಡೆಸಿದ ನಟಿ ಮಂದಿರಾ ಬೇಡಿ; ವೈರಲ್ ಆಯ್ತು ಫೋಟೋ

0

ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ರಾಜ್ ಕೌಶಲ್ ಹೃದಯಾಘಾತದಿಂದ ಬುಧವಾರ ಬೆಳಗ್ಗೆ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾದರು. ಪತಿಯ ನಿಧನದಿಂದ ನಟಿ ಮಂದಿರಾ ಬೇಡಿ ದುಃಖಕ್ಕೀಡಾಗಿದ್ದರೂ ಪತಿಯ ಅಂತ್ಯಕ್ರಿಯೆಯನ್ನು ತಾವೇ ನಡೆಸಿದ್ದಾರೆ. ಸಂಪ್ರದಾಯ ಮೀರಿ ತಾವೇ ಮಡಿಕೆ ಹೊತ್ತು ಸಾಗಿದ್ದಾರೆ. ಪತಿಯ ಅಂತಿಮ ವಿಧಿವಿಧಾನಗಳನ್ನು ನಡೆಸಿದ್ದು, ಈ ಫೋಟೋಗಳು ವೈರಲ್ ಆಗಿವೆ.
ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ಪುರುಷರು ಮಾಡುತ್ತಾರೆ. ಶವದ ಮುಂದೆ ಹೊತ್ತು ಸಾಗುವ ಮಡಿಕೆಯನ್ನು ಮಹಿಳೆಯರು ಸ್ಪರ್ಶಿಸುವುದಿಲ್ಲ. ಆದರೆ ಮಂದಿರಾ ಬೇಡಿ ಸಂಪ್ರದಾಯ ಮೀರಿ ತಾವೆ ಮಡಿಕೆ ಹೊತ್ತು ಸಾಗುವ ಮೂಲಕ ಪತಿಯ ಅಂತಿಮ ವಿಧಿವಿಧಾನಗಳನ್ನು ನಿರ್ವಹಿಸಿದ್ದಾರೆ.

ಅಂತ್ಯಕ್ರಿಯೆಯಲ್ಲಿ ಬಾಲಿವುಡ್ ಗಣ್ಯರಾದ ಅನೀಶ್ ಚೌಧರಿ, ರೋಹಿತಿ ರಾಯ್, ಅಪೂರ್ವ ಅಗ್ನಿಹೋತ್ರ, ಹುಮಾ ಖುರೇಷಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಎಲ್ಲರೂ ಮಂದಿರ ಬೇಡಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.

ಮಂದಿರಾ ಬೇಡಿ, ರಾಜ್ ಕೌಶಲ್ 1999 ರಾಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ರಾಜ್ ಕೌಶಲ್ 90 ಮತ್ತು 2000 ದಶಕದಲ್ಲಿ ಹೆಚ್ಚು ಸಕ್ರಿಯರಾಗಿದ್ದು, ‘ಪ್ಯಾರ್ ಮೇ ಕಭಿ ಕಭಿ’ (1999) ಮತ್ತು ‘ಶಾದಿ ಕಾ ಲಡ್ಡೂ'(2004) ಎಂಬ ಚಿತ್ರಗಳನ್ನು ನಿರ್ದೇಶಿಸಿ ನಿರ್ಮಿಸಿದ್ದರು.ಇವರ ನಿರ್ದೇಶನದ ಕೊನೆಯ ಸಿನಿಮಾ 2006 ರಲ್ಲಿ ಬಿಡುಗಡೆಯಾಗಿದ್ದ ‘ಆಂಥೋನಿ ಕೌನ್ ಹೈ’. ಈ ಚಿತ್ರದಲ್ಲಿ ಅರ್ಷದ್ ವಾರ್ಸಿ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com