ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಜುಲೈ 20-22ರ ವರೆಗೆ ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ. ಈ ಅಭ್ಯಾಸ ಪಂದ್ಯವನ್ನು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ವ್ಯವಸ್ಥೆ ಮಾಡಲಿದೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ವಿನಂತಿಯ ಬಳಿಕ ಇಸಿಬಿ ಇದಕ್ಕೆ ಒಪ್ಪಿಕೊಂಡಿದೆ.
ಕೆಲಮಾಹಿತಿ ಪ್ರಕಾರ ವಿರಾಟ್ ಕೊಹ್ಲಿಯ ತಂಡ ಇನ್ನೂ ನಿರ್ಧಾರ ಗೊಂಡಿಲ್ಲ. ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನ ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದ ಬಳಿಕ ಭಾರತೀಯ ತಂಡ ಸಣ್ಣ ಬಿಡುವು ಪಡೆದುಕೊಂಡಿರುವ ಭಾರತದ ತಂಡಕ್ಕೆ ಅಭ್ಯಾಸ ಪಂದ್ಯದ ಅಗತ್ಯವಿದೆ.
ಈ ಪಂದ್ಯವು ಜುಲೈ 20-22ರ ವರೆಗೆ ನಡೆಯಲಿದ್ದು ತಂಡಗಳು ಶೀಘ್ರ ನಿರ್ಧಾರವಾಗಲಿದೆ. ಆರಂಭಿಕ ಬ್ಯಾಟ್ಸ್‌ಮನ್ ಶುಬ್ಮನ್ ಗಿಲ್ ಗಾಯಗೊಂಡಿದ್ದು, ತಂಡದಿಂದ ಹೊರಗುಳಿದಿದ್ದಾರೆ. ಭಾರತದ ಆರಂಭಿಕ ಸ್ಥಾನಕ್ಕೆ ಯಾರು ಎಂದು ನಿರ್ಧಾರ ಗೊಂಡಿಲ್ಲ. ಆಗಸ್ಟ್ 4ರಿಂದ ಸೆಪ್ಟೆಂಬರ್ 14ರ ವರೆಗೆ ಭಾರತ-ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
Advertisement. Scroll to continue reading.