ಲಂಡನ್: ಶುಕ್ರವಾರದಂದು ನಡೆದ ವಿಂಬಲ್ಡನ್ನ ಐತಿಹಾಸಿಕ ಆಲ್ ಇಂಡಿಯನ್ ಮಿಕ್ಸ್ಡ್ ಡಬಲ್ಸ್ ಟೆನಿಸ್ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಭಾರತದ ಅನುಭವಿ ಜೋಡಿ ಸಾನಿಯಾ ಮಿರ್ಝಾ -ರೋಹನ್ ಬೋಪಣ್ಣ ಜಯ ಸಾಧಿಸಿದ್ದಾರೆ. ಸಾನಿಯಾ-ಬೋಪಣ್ಣ ಜೋಡಿ ಭಾರತದವರೇ ಆದ ಅಂಕಿತಾ ರೈನಾ ಮತ್ತು ರಾಜ್ಕುಮಾರ್ ರಾಮನಾಥನ್ ಜೋಡಿಯನ್ನು ಸೋಲಿಸಿದೆ.
ಗ್ರ್ಯಾಂಡ್ಸ್ಲ್ಯಾಮ್ ಟೂರ್ನಿಯೊಂದರಲ್ಲಿ ಭಾರತೀಯ ಜೋಡಿಗಳೆರಡು ಮುಖಾಮುಖಿಯಾಗಿದ್ದು ಇದೇ ಪ್ರಥಮ ಬಾರಿಯಾಗಿದ್ದು, ಮಿಕ್ಡ್ಸ್ ಡಬಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಸಾನಿಯಾ ಮಿರ್ಝಾ-ರೋಹನ್ ಬೋಪಣ್ಣ ಜೋಡಿ ರಾಜ್ಕುಮಾರ್ ರಾಮನಾಥನ್-ಅಂಕಿತಾ ರೈನಾ ಜೋಡಿಯನ್ನು 6-2, 7-6 (7-5)ರ ಸೆಟ್ ಅಂತರದಿಂದ ಸೋಲಿಸಿದೆ.
ಭಾರತದ ರಾಜ್ಕುಮಾರ್ ರಾಮನಾಥನ್ ಕಡೆಗೂ ಸತತ ಪ್ರಯತ್ನದ ಬಳಿಕ ಮಿಕ್ಸ್ಡ್ ಡಬಲ್ಸ್ ಮೂಲಕ ವಿಂಬಲ್ಡನ್ ನಂತಹ ಪ್ರಮುಖ ಟೆನಿಸ್ ಟೂರ್ನಿಗೆ ಪದಾರ್ಪಣೆ ಮಾಡಿದ್ದಾರೆ. ಇದಕ್ಕೂ ಮುನ್ನ ರಾಮನಾಥನ್ ಒಟ್ಟು 21 ಬಾರಿ ಸಿಂಗಲ್ಸ್ನಲ್ಲಿ ಸ್ಪರ್ಧಿಸಲು ಅರ್ಹತೆಗಾಗಿ ಪ್ರಯತ್ನಿಸಿ ಸೋತು ನಿರಾಶರಾಗಿದ್ದರು.
Advertisement. Scroll to continue reading.