ಸಿನಿಮಾ

ವೀರಂ ಟೀಸರ್ ರಿಲೀಸ್; ವಿಷ್ಣುದಾದಾ ಅಭಿಮಾನಿಯಾಗಿ ಡೈನಾಮಿಕ್ ಪ್ರಿನ್ಸ್ ಅಬ್ಬರ

0

ಚಂದನವನ: ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರಿಗೆ ಇಂದು 34 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅವರ ಹುಟ್ಟುಹಬ್ಬಕ್ಕೆ ವೀರಂ' ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಬಿಡುಗಡೆಯಾಗಿರುವ ಟೀಸರ್ ನಲ್ಲಿಯೂ ದೃಢವಾಗುತ್ತೆ. ಯಾಕೇಂದ್ರೆ, ಟೀಸರ್ ನಲ್ಲಿ ಪ್ರಜ್ವಲ್ ಕೈಯಲ್ಲಿ ದಾದಾ ಹಚ್ಚೆ ಇದೆ. ಈ ಬಗ್ಗೆಯೇ ಉಲ್ಲೇಖಿಸಲಾಗಿದೆ. ಉದ್ದ ಕೂದಲು ವಿಭಿನ್ನ ಗೆಟಪ್‍ನಲ್ಲಿ, ಎರಡು ಶೇಡ್ ನಲ್ಲಿ ಈ ಚಿತ್ರದಲ್ಲಿ ಪ್ರಜ್ವಲ್ ಕಾಣಿಸಿಕೊಂಡಿದ್ದಾರೆ.ಕೈಯಲ್ಲಿ ಮಚ್ಚು, ಜೊತೆಯಲ್ಲಿ ಮಚ್ಚಾ ಅವ್ನೇ ಅಂತಾ ಹೊಡೆಯಕ್ಕೆ ಹೋದೆ ಅಣ್ಣಾ, ನನ್ನ ಕೈಯಲ್ಲಿದ್ದ ಮಚ್ಚಿಗಿಂತ, ಅವನ ಕೈಯಲ್ಲಿದ್ದ ಹಚ್ಚೆಗೆ ಒಂದು ಖದರ್ ಇದೆ ಅಂತಾ ಗೊತ್ತಾಯಿತಣ್ಣಾ ಅನ್ನೋ ಪಂಚಿಂಗ್ ಡೈಲಾಗ್ ಸಖತ್ ಕಿಕ್ ಕೊಡುತ್ತಿದೆ.
ಕಥೆ, ಚಿತ್ರಕಥೆ ಬರೆದು ಕುಮಾರ್ ರಾಜ್ ನಿರ್ದೇಶಿಸಿದ್ದು, ಪ್ರಜ್ವಲ್ ದೇವರಾಜ್ ಗೆ ರಚಿತಾ ರಾಮ್ ನಾಯಕಿ. ಶ್ರೀನಗರ ಕಿಟ್ಟಿ, ಶಿಷ್ಯ ದೀಪಕ್ ಮೊದಲಾದವರು ಚಿತ್ರದಲ್ಲಿದ್ದಾರೆ. ಅನೂಪ್ ಸೀಳಿನ್ ಸಂಗೀತವಿದ್ದು, ಲವಿತ್ ಛಾಯಾಗ್ರಹಣವಿದೆ. ಕೆ.ಎಂ.ಶಶಿಧರ್ ಬಂಡವಾಳ ಹೂಡಿದ್ದಾರೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com