ಉಜಿರೆ: ಸರಕಾರದ ಅನ್ ಲಾಕ್ ಆದೇಶದಂತೆ ಸೋಮವಾರದಿಂದ ಧಾರ್ಮಿಕ ಕ್ಷೇತ್ರಗಳ ಬಾಗಿಲು ಭಕ್ತರಿಗಾಗಿ ತೆರೆದಿವೆ. ಹಾಗಾಗಿ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತರು ದೇವರ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಭಕ್ತರು ಶ್ರೀಮಂಜುನಾಥ ಸ್ವಾಮಿಯ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ದೇವಸ್ಥಾನವನ್ನು ಭಕ್ತರಿಗೆ ಮುಕ್ತಗೊಳಿಸಲು ರವಿವಾರವೇ ಕ್ಷೇತ್ರದಲ್ಲಿ ಪೂರ್ವಸಿದ್ಧತೆ ನಡೆಸಲಾಗಿದ್ದು, ದೇವಳದಲ್ಲಿ ಸ್ಯಾನಿಟೈಜೇಷನ್ ಮಾಡಲಾಗಿದೆ.
ಲಾಕ್ ಡೌನ್ ನಿಂದಾಗಿ ಎರಡು ತಿಂಗಳಗಳ ಕಾಲ ಭಕ್ತರಿಗೆ ದೇವರ ದರ್ಶನ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಈಗ ದೇವರ ದರ್ಶನ ಮಾಡುವ ಭಾಗ್ಯ ದೊರೆತಿದೆ. ಇದರೊಂದಿಗೆ ತಾಲೂಕಿನ ಬಯಲು ಆಲಯ ಕೊಕ್ಕಡ ಶ್ರೀ ಸೌತಡ್ಕ ಮಹಾಗಣಪತಿ ದೇವಸ್ಥಾನ, ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನ, ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ, ಕನ್ಯಾಡಿ ಶ್ರೀ ರಾಮಕ್ಷೇತ್ರ ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ಭಕ್ತರು ಕಂಡುಬಂದರು.
ಕುಕ್ಕೆಯಲ್ಲಿ ಭಕ್ತರಿಗೆ ಅವಕಾಶ
Advertisement. Scroll to continue reading.
ದಕ್ಷಿಣ ಕನ್ನಡದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಕೂಡ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶ್ರೀ ಕ್ಷೇತ್ರದಲ್ಲಿ ಪ್ರಮುಖ ಸೇವೆಗಳಾದ ಆಶ್ಲೇಷ ಬಲಿ ಹಾಗೂ ಸರ್ಪಸಂಸ್ಕಾರ ಸೇವೆಗಳಿಗೆ ಅವಕಾಶವಿರುವುದಿಲ್ಲ.
ಇನ್ನುಳಿದಂತೆ ದಕ್ಷಿಣ ಕನ್ನಡದ ಎಲ್ಲಾ ಜಿಲ್ಲೆಯ ದೇವಸ್ಥಾನಗಳು ಭಕ್ತರಿಗೆ ಪ್ರವೇಶ ಮುಕ್ತವಾಗಿದ್ದು, ಕೊರೊನಾ ನಿಯಮದ ಪ್ರಕಾರ ಅವಕಾಶ ನೀಡಲಾಗುತ್ತಿದೆ.
Advertisement. Scroll to continue reading.