ಕರಾವಳಿ

ಡಿಕೆಶಿಗೆ ಖಡ್ಸಲೆ ಉಡುಗೊರೆ; ದೈವದ ಖಡ್ಸಲೆಗೆ ಕಾಂಗ್ರೆಸ್ ನಿಂದ ಅವಮಾನ : ಶಾಸಕ ಸುನೀಲ್ ಕುಮಾರ್ ಖಂಡನೆ

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ದೈವಸ್ಥಾನಗಳಲ್ಲಿ ಧಾರ್ಮಿಕ ಕಾರ್ಯಗಳಿಗೆ ಬಳಸುವ ಪವಿತ್ರ ಖಡ್ಸಲೆಯನ್ನು ಹೆಬ್ರಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿಯವರು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ. ಕೆ ಶಿವಕುಮಾರ್ ಅವರಿಗೆ ಉಡುಗೊರೆಯಾಗಿ ನೀಡುವ ಮೂಲಕ ತುಳುನಾಡಿನ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದ್ದಾರೆ. ದೈವಸ್ಥಾನದಲ್ಲಿ ಇರಬೇಕಾದ ಖಡ್ಸಲೆಯನ್ನು ರಾಜಕೀಯ ವೇದಿಕೆಯಲ್ಲಿ ಉಡುಗೊರೆಯಾಗಿ ನೀಡುವುದು ದೈವರಾಧನೆ ಹಾಗೂ ಸಮಸ್ತ ತುಳು ನಾಡಿನ ಜನತೆಗೆ ಎಸಗಿದ ಅವಮಾನ. ಹಿಂದೂ ಧಾರ್ಮಿಕ ಪದ್ಧತಿಗೆ ಅವಮಾನಿಸುವ ಇಂಥ ವರ್ತನೆ ಖಂಡನೀಯ. ಕೂಡಲೇ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜನತೆಯ ಕ್ಷಮೆಯಾಚಿಸಬೇಕೆಂದು ಸರಕಾರದ ಮುಖ್ಯಸಚೇತಕ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ .

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com