ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿ, ಎಲ್ಲರೂ ಜೊತೆಯಾಗಿ ಕುಳಿತು ಉಪಾಹಾರ, ಸಹಭೋಜನ ಸೇವಿಸುವ ಸೊಗಡು ಹಳ್ಳಿಗಾಡಿನಲ್ಲಿ ಕಂಡುಬರುವುದು ಸಹಜ ದೃಶ್ಯ.
ಬಾರಕೂರು ಕಚ್ಚೂರು ಹೊಸ್ಕೆರೆ ದೇವಾನಂದ್ ಎಂಬವರ ಮನೆಯಲ್ಲಿ ಗುರುವಾರ ಎರಡು ಎಕ್ರೆ ಕ್ರಷಿಯ ಭತ್ತದ ನಾಟಿಕ್ಕೆ ನಾಟಿಗೆ ಬಂದ ಹೆಂಗಸರಿಗೆ ಬೆಳಗ್ಗಿನ ಉಪಹಾರಕ್ಕೆ ಕುಳಿತ ದೃಶ್ಯ. ಮನೆಯ ಯಜಮಾನಿ ಕೃ ಚಟುವಟಿಕೆಗೆ ಬಂದವರಿಗೆ ಬೆಳಿಗ್ಗೆ ಚಹಾ ತಿಂಡಿ ಮಧ್ಯಾಹ್ನ ಊಟವನ್ನು ತಂದು ಗದ್ದೆ ಅಂಚಿನಲ್ಲೊ ಅಥವಾ ಮರದ ನೆರಳಿನಲ್ಲೋ ಕುಳಿತು ತಿನ್ನುವ ಸವಿ ಮತ್ತು ಅದರ ರುಚಿ ಅನುಭವಿಸಿದವರೇ ಬಲ್ಲರು. ಇಲ್ಲಿನ ಹೊಸ್ಕೆರೆ ಗಣಪತಿ ದೇವಸ್ಥಾನ ದ ಎದುರು ಭಾಗದ ಅಂಗಣದಲ್ಲಿ ಕ್ರಷಿ ಕಾಯಕಕ್ಕೆ ಬಂದವರಿಗೆ ಮನೆಯವರು ಬಡಿಸುವ ಮತ್ತು ಅದನ್ನು ಸವಿಯುವ ಅಪರೂಪದ ಚಿತ್ರಣಗಳು ಮುಂದಿನ ದಿನದಲ್ಲಿ ಕಾಣಸಿಗದು.
Advertisement. Scroll to continue reading.
ಯಾಂತ್ರೀಕರಣದಿಂದ ಕಳೆದುಹೋಗಲಿದೆ ಖುಷಿ:
ಈ ರೀತಿ ಜೊತೆಯಲ್ಲಿ ಕುಳಿತು ಸಹಭೋಜನ ಮಾಡುವ ಖುಷಿ ಪ್ರತಿಯೊಂದು ಕೂಡಾ ಯಾಂತ್ರಿಕರಣವಾಗುತ್ತಿರುವ ಕೃಷಿ ಚಟುವಟಿಕೆಯಿಂದಾಗಿ ಮರೆಯಾಗುತ್ತಿದೆ. ಎಲ್ಲದಕ್ಕೂ ಮೆಷಿನ್ ಗಳು ಬರುತ್ತಿವೆ. ಈ ಎಲ್ಲಾ ಸಂಭ್ರಮ ಮರೆಯಾಗಲಿದೆ.