ಕೋಟ : ಸಾಲಿಗ್ರಾಮ ಪಟ್ಟಣ ಪಂಚಾಯತ್ ನಿಂದ ಅನಧಿಕೃತವಾಗಿ ಮೋರಿಗೆ ಹಾಕಿದ್ದ ಪೈಪ್ ತೆರವು
Published
0
ವರದಿ : ದಿನೇಶ್ ರಾಯಪ್ಪನಮಠ
ಕೋಟ : ಚಿತ್ರಪಾಡಿ ಗ್ರಾಮದ ಕಾರ್ತಟ್ಟು ಯಲ್ಲಪ್ಪನಾಯಕ್ ರಸ್ತೆಯಲ್ಲಿ ಹೊಸದಾಗಿ ನಿರ್ಮಾಣ ಗೊಂಡಿರುವ ತೆರೆದ ಮೋರಿಗೆ ಕೆಲವೊಂದು ಸ್ಥಳೀಯ ಮನೆಗಳಿಂದ ಕೊಳಚೆ ನೀರನ್ನು ಬಿಡಲಾಗುತ್ತಿತ್ತು. ಇದರಿಂದಾಗಿ ಕೆಲವೊಂದು ಮನೆಗಳ ಮುಂದೆ ಈ ಕೊಳಚೆ ನೀರು ನಿಂತು ಸಮಸ್ಯೆಯಾಗುತ್ತಿತ್ತು. ಅಲ್ಲದೆ ಸಾರ್ವಜನಿಕರಿಗೂ ಸಹ ಸಮಸ್ಯೆ ಉಂಟಾಗಿದ್ದು, ಈ ಬಗ್ಗೆ ಸ್ಥಳೀಯ ಶಂಕರನಾರಾಯಣ ಐತಾಳರು ಸಾಲಿಗ್ರಾಮ ಪಟ್ಟಣ ಪಂಚಾಯತ್ ಗೆ ದೂರು ನೀಡಿದ್ದರು. ಆ ದೂರಿನ ಮೇರೆಗೆ ಸ್ಥಳೀಯ ಆಡಳಿತವು ಎಚ್ಚೆತ್ತುಕೊಂಡು ಗುರುವಾರ ಬೆಳಿಗ್ಗೆ ಪಟ್ಟಣ ಪಂಚಾಯತ್ ಅಧ್ಯಕ್ಷರು ಹಾಗೂ ವಾರ್ಡ್ ಸದಸ್ಯರು ಸೇರಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬಂದು ಪರಿಶೀಲಿಸಿ, ಚರಂಡಿಯು ಕೇವಲ ಮಳೆಗಾಲದ ನೀರು ಹರಿಯುವಿಕೆಗಾಗಿ ಹೊರತು ಯಾವುದೇ ಕಾರಣಕ್ಕೂ ರಸ್ತೆ ಆಸುಪಾಸಿನ ಮನೆಯವರ ಕೊಳಚೆ ನೀರು ಹರಿಯುವುದಕ್ಕಾಗಿರುವುದಲ್ಲ ಎಂದು ತಿಳಿಸಿ, ಮೋರಿಗೆ ಅಳವಡಿಸಿದ ಪೈಪ್ ನ್ನು ತೆರವು ಗೊಳಿಸಿ ಅಲ್ಲಿರುವ ಸಮಸ್ಯೆ ಬಗೆಹರಿಸಿ ರಸ್ತೆ ಕಾಂಕ್ರಿಟೀಕರಣಕ್ಕೆ ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಪ. ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ, ಉಪಾಧ್ಯಕ್ಷೆ ಅನುಸೂಯ ಹೇರಳೆ, ವಾರ್ಡ್ ವಾರ್ಡ್ ಸದಸ್ಯರು ಶ್ಯಾಮ್ ಸುಂದರ್ ನಾಯಿರಿ, ಸುಕನ್ಯ ಶೆಟ್ಟಿ, ಪ. ಪಂ. ಮುಖ್ಯಧಿಕಾರಿ ಅರುಣ್. ಬಿ, ಇಂಜಿನಿಯರ್ ರಾಜಶೇಖರ್, ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ, ಹಾಗೂ ಸ್ಥಳೀಯರಾದ ಶಂಕರನಾರಾಯಣ ಐತಾಳ್, ನವೀನ್ ಐತಾಳ್ ಮೊದಲಾದವರು ಉಪಸ್ಥಿತರಿದ್ದರು.