ಸಿನಿಮಾ

ಕ್ರಿಕೆಟರ್ ಹರ್ಭಜನ್ ಸಿಂಗ್ – ನಟಿ ಗೀತಾ ಬಸ್ರಾ ದಂಪತಿಗೆ ಗಂಡು ಮಗು ಜನನ

0

ಭಾರತ ಕ್ರಿಕೆಟ್ ತಂಡದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಮತ್ತು ನಟಿ ಗೀತಾ ಬಸ್ರಾ ದಂಪತಿಗೆ ಗಂಡು ಮಗು ಜನಿಸಿದೆ. ಶನಿವಾರ ಮಧ್ಯಾಹ್ನ ಗೀತಾ ಬಸ್ರಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಹರ್ಭಜನ್ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ‘ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ’ ಎಂದು ತಿಳಿಸಿದ್ದಾರೆ.
ಎರಡನೇ ಬಾರಿ ತಂದೆಯಾದ ಸಂತಸವನ್ನು ಹಂಚಿಕೊಂಡಿರುವ ಹರ್ಭಜನ್, ”ಅದ್ಭುತ ಉಡುಗೊರೆ, ಇದು ಬಹಳ ವಿಶೇಷವಾದ ಕ್ಷಣ. ನಮ್ಮ ಜೀವನ ಸಂಪೂರ್ಣವಾಗಿದೆ, ನಾವು ಸಂತೋಷ ಸಾಗರದಲ್ಲಿ ಮುಳುಗಿದ್ದೇವೆ. ನಮ್ಮ ಕ್ಷೇಮ ಹಾಗು ಸಂತಸಕ್ಕಾಗಿ ಶುಭಕೋರಿದ ಎಲ್ಲಾ ಹಿತೈಷಿಗಳಿಗೆ ಧನ್ಯವಾದಗಳು” ಎಂದು ಪೋಸ್ಟ್ ಮಾಡಿದ್ದಾರೆ.

ಹರ್ಭಜನ್ ಸಿಂಗ್ ಹಾಗೂ ನಟಿ ಗೀತಾ ಬಸ್ರಾ ಅವರ ವಿವಾಹ ಅಕ್ಟೋಬರ್ 29, 2015 ರಲ್ಲಿ ಪಂಜಾಬ್‌ನ ಜಲಂಧರ್ನಲ್ಲಿ ನಡೆದಿತ್ತು. 2016 ರಲ್ಲಿ ಹರ್ಭಜನ್ ಸಿಂಗ್ – ಗೀತಾ ದಂಪತಿಗೆ ಹೆಣ್ಣು ಮಗು ಜನಿಸಿತ್ತು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com