ಬೆಂಗಳೂರು : ಕೊರೋನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದಂತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಿಇ, ಎಂಬಿಎ, ಎಂಸಿಎ ಸೇರಿದಂತೆ ವಿವಿಧ ಕೋರ್ಸ್ ಗಳಿಗೆ ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದೆ. ಜುಲೈ.26 ರಿಂದ ಆಗಸ್ಟ್ 17ರ ವರೆಗೆ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ.
ಈ ಕುರಿತಂತೆ ವಿಟಿಯು ಮೌಲ್ಯಮಾಪನ ರಿಜಿಸ್ಟರ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ವಿವಿಧ ಕಾರಣಗಳಿಂದಾಗಿ ಮುಂದೂಡಲ್ಪಟ್ಟಿದ್ದಂತ ಬಿಇ, ಎಂಬಿಎ, ಎಂಸಿಎ, ಎಂ.ಆರ್ಚ್ ಪರೀಕ್ಷೆಗಳನ್ನು ಜುಲೈ ಹಾಗೂ ಆಗಸ್ಟ್ 2021ರಂದು ನಿಗದಿ ಪಡಿಸಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯನ್ನು ಅಧಿಕೃತ ವೆಬ್ ಸೈಟ್ https://vtu.ac.in/ ನಲ್ಲಿ ಪ್ರಕಟಿಸಿದೆ.
Advertisement. Scroll to continue reading.