ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನ, ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವೊಂದು ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗ್ತಿದೆ. ನೆಟ್ಟಿಗರು ಮೋದಿಯವರನ್ನು ಮೆಚ್ಚಿಕೊಳ್ಳುತ್ತಿದ್ದು, ಸರಳತೆಗೆ ಮತ್ತೊಂದು ಹೆಸರೇ ಮೋದಿ ಎಂದು ಕೊಂಡಾಡುತ್ತಿದ್ದಾರೆ.
ದೆಹಲಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಸಂಸತ್ತಿನ ಮಾನ್ಸೂನ್ ಅಧಿವೇಶನದ ಮೊದಲ ದಿನದ ಮುಂಚಿತವಾಗಿ ಪ್ರಧಾನಿ ಮೋದಿ ಅವರು, ಸ್ವತಃ ತಮ್ಮ ಛತ್ರಿಯನ್ನ ತಾವೇ ಹಿಡಿದು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದರು. ಇತರೆ ಗಣ್ಯ ವ್ಯಕ್ತಿಗಳಂತೆ ಛತ್ರಿ ಬೇರೊಬ್ಬರ ಕೈಗೆ ಕೊಟ್ಟಿಲ್ಲ. ಇದು ಮೆಚ್ಚುಗೆಗೆ ಪಾತ್ರವಾಗಿದೆ. ಪೋಟೋಗೆ ನೆಟ್ಟಿಗರು ಫುಲ್ ಫೀದಾ ಆಗಿದ್ದು, ಪ್ರಧಾನಿ ಮೋದಿಯವರ ಸರಳತೆಯ ಉತ್ತುಂಗದಲ್ಲಿದ್ದಾರೆ ಎಂದು ವರ್ಣಿಸಿದ್ದಾರೆ.
Advertisement. Scroll to continue reading.