ಬಾಹ್ಯಾಕಾಶಯಾನ ಮುಗಿಸಿ ಮರಳಿದ ವಿಶ್ವದ ಅತೀ ಶ್ರೀಮಂತ ವ್ಯಕ್ತಿ
Published
0
ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಜೆಫ್ ಬೆಜೋಸ್ ಅವರು 11 ನಿಮಿಷವನ್ನು ಅಂತರಿಕ್ಷದಲ್ಲಿ ಕಳೆದಿದ್ದಾರೆ. ಕರ್ಮನ್ ಲೈನ್ ಎಂಬ ಬಿಂದುವನ್ನು ಇಂದು ತಲುಪಿ ಬಂದಿದ್ದಾರೆ.
ಅಂತರಿಕ್ಷವನ್ನು 4 ಮಂದಿ ಪಯಣಿಸಿದ್ದು, ನ್ಯೂ ಶಿಫರ್ಡ್ ಎಂಬ ಅಂತರಿಕ್ಷ ದಲ್ಲಿ 66.5 ಮೀಲ್ಸ್(107 km ) ರಷ್ಟು ದೂರ ಪ್ರಯಾಣಿಸಿ ಬಂದಿದ್ದಾರೆ.
ಜೆಫ್ ಬೆಜೋಸ್ ಮತ್ತು ಮೂವರು ಸಹ ಪ್ರಯಾಣಿಕರು ಪಶ್ಚಿಮ ಟೆಕ್ಸಾಸ್‌ನಿಂದ ಬಾಹ್ಯಾಕಾಶಕ್ಕೆ ಪ್ರಯಾಣಿಸಿ, ವಾಪಸಾಗಿದ್ದಾರೆ. ಜೆಫ್ ಅವರ ಈ ಕನಸಿನ ಯಾನದಲ್ಲಿ ಅವರ ಜತೆ ಸಹೋದರ ಮಾರ್ಕ್ ಪ್ರಯಾಣಿಸಿದ್ದು, 18 ವರ್ಷದ ಆಲಿವರ್ ಡೀಮೆನ್ ಅತ್ಯಂತ ಕಿರಿಯ ಬಾಹ್ಯಾಕಾಶ ಪ್ರವಾಸಿಗರಾಗಿದ್ದರು ಹಾಗೂ 82 ವರ್ಷದ ವಾಲಿ ಫಂಕ್ ಬಾಹ್ಯಾಕಾಶಕ್ಕೆ ಹೋದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.
ಅಂತರಿಕ್ಷವು ಸುಮಾರು 3700 ಕಿ.ಮೀ ವೇಗವಾಗಿ ಚಲಿಸಿದ್ದು ಲಿಕ್ವಿಡ್ ಹೈಡ್ರೋಜನ್ ಹಾಗೂ ಲಿಕ್ವಿಡ್ ಆಕ್ಸಿಜನ್ ಅನ್ನು ಇಂಧನಕ್ಕೆ ಬಳಸಲಾಗಿತ್ತು.