ರಾಷ್ಟ್ರೀಯ

ಭಾರತದಲ್ಲಿ ತಯಾರಾಗುತ್ತಿದೆ ವಿಶ್ವದ ಮೊದಲ ಡಿ ಎನ್ ಎ ಲಸಿಕೆ

0

ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಡಿಎನ್ ಎ ಲಸಿಕೆಯನ್ನು ಸಿದ್ಧಪಡಿಸಿದ ವಿಶ್ವದ ಮೊದಲ ದೇಶ ಭಾರತವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ ಸಂಸತ್ತಿನಲ್ಲಿ ಹೇಳಿದ್ದಾರೆ. ಇದನ್ನು ಅಹ್ಮದಾಬಾದ್ ನ ಜೈದಸ್ ಕ್ಯಾಡಿಲಾ ಸಿದ್ಧಪಡಿಸಿದ್ದಾರೆ ಮತ್ತು ಈ ಲಸಿಕೆ ಝೈಕೋವಿ-ಡಿ ಎಂದು ಕರೆಯಲ್ಪಡುತ್ತದೆ.

ವೈದ್ಯಕೀಯ ಪ್ರಯೋಗಗಳ ಮೂರನೇ ಹಂತದ ಆರಂಭಿಕ ಫಲಿತಾಂಶಗಳ ನಂತರ, ವಿಶ್ವದ ಮೊದಲ ಡಿಎನ್ ಎ ಲಸಿಕೆಗೆ ತುರ್ತು ಪರಿಸ್ಥಿತಿಯನ್ನು ಬಳಸಲು ಭಾರತದ ಔಷಧ ನಿಯಂತ್ರಕ ಜನರಲ್ ಅವರಿಂದ ಅನುಮತಿ ಪಡೆದಿರುವುದಾಗಿ ಝೈಡಸ್ ಹೇಳಿದರು. ಈ ಲಸಿಕೆಯೂ ಕೊರೊನಾ ವೈರಸ್ ವಿರುದ್ಧ ಶೇಕಡಾ 66.6 ರಷ್ಟು ಪರಿಣಾಮಕಾರಿ ಎಂದು ಕಂಡುಬಂದಿದೆ.

ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ, ಲಸಿಕೆಯನ್ನೂ ಪಡೆದ ಯಾವ ಸ್ವಯಂಸೇವಕರ ಪ್ರಯೋಗದ ನಂತರ ಯಾವುದೇ ರೋಗದ ಬಗ್ಗೆ ದೂರು ನೀಡಿಲ್ಲ ಅಥವಾ ಯಾರೂ ಮೃತನಾಗಿಲ್ಲ ಎಂದು ವರದಿಮಾಡಿದೆ .

Advertisement. Scroll to continue reading.

ಕೋವಿಡ್ 19 ರ ವಿರುದ್ಧ ಈ ಲಸಿಕೆಯು ಕೆಲಸ ಮಾಡಿತ್ತು. ದೇಶದ ಹಲವಾರು ಕಡೆ ಈ ಲಸಿಕೆಯ ಪ್ರಯೋಗ ನಡೆಸಲಾಗಿದ್ದು, 18 ವರ್ಷ ವಯಸ್ಸಿನವರ ಮೇಲೂ ಈ ಲಸಿಕೆ ಪಯೋಗ ನಡೆಸಿದ್ದು, ಯಾವುದೇ ಅಡ್ಡ ಪರಿಣಾಮ ಇಲ್ಲ ಹಾಗೂ ಸುರಕ್ಷಿತ ಎಂದು ಸಾಭೀತುಪಡಿಸಿದೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com