ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾನುವಾರ ನಡೆದ ಮೂರನೇ ಸ್ಥಾನದ ಪ್ಲೇ-ಆಫ್ ನಲ್ಲಿ ಚೀನಾದ ಹೆ ಬಿಂಗ್ ಜಿಯಾವೊ ಅವರನ್ನು ಸೋಲಿಸಿದ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಕಂಚಿನ ಪದಕವನ್ನು ಗೆದ್ದಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ ಸೆಮಿಪೈನಲ್ ನಲ್ಲಿ ಚೈನೀಸ್ ತೈಪೆಯ ವಿಶ್ವದ ನಂ.1 ತೈ ತ್ಸು ಯಿಂಗ್ ವಿರುದ್ಧ ಸೋಲು ಕಂಡಿದ್ದ ಅವರು ಇದೀಗ ಕಂಚಿನ ಪದಕ ಗೆದ್ದಿದ್ದಾರೆ.