ಕರಾವಳಿ

ಮಂದಾರ್ತಿ: ಯಕ್ಷಗಾನ ಕಲಾವಿದರಿಂದ ರಕ್ತದಾನ

0

ವರದಿ : ದಿನೇಶ್ ರಾಯಪ್ಪನಮಠ

ಮಂದಾರ್ತಿ : ಯಕ್ಷಗಾನ ಕಲಾವಿದರ ಒಕ್ಕೂಟ, ಅಭಯ ಹೆಲ್ಪ್ ಲೈನ್ ಉಡುಪಿ, ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ ಇವರುಗಳ ಸಹಯೋಗದೊಂದಿಗೆ ಮಂದಾರ್ತಿಯಲ್ಲಿ ಬ್ರಹತ್ ರಕ್ತದಾನ ಶಿಬಿರವು ನಡೆಯಿತು. ದೀಪ ಬೆಳಗಿಸುದರ ಮೂಲಕ ಹೆಗ್ಗುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಹೆಗ್ಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಲವಾರು ಬಾರಿ ರಕ್ತದಾನ ಮಾಡಿದ ಯಕ್ಷಗಾನ ಕಲಾವಿದ ಸಂದೇಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಸಭಾಕಾರ್ಯಕ್ರಮದ ಅಧ್ಯಕ್ಷತೆ ಉದ್ಯಮಿ ಶೇಡಿ ಕೊಡ್ಲು ವಿಠಲ ಶೆಟ್ಟಿ ವಹಿಸಿದ್ದರು. ಈ ವೇಳೆ ಹೆಗ್ಗುಂಜೆ ಗ್ರಾ.ಪಂ. ಗೆ ಆಕ್ಸಿಮೀಟರ್ ಹಾಗೂ ಥರ್ಮಲ್ ಸ್ಕ್ಯಾನರ್ ಕೊಡುಗೆಯಾಗಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಗಣೇಶ್ ಕಿಣಿ, ಉದ್ಯಮಿ ದೀಪಕ್ ಶೆಟ್ಟಿ, ಪತ್ರಕರ್ತ ಶ್ರೀಪತಿ ಹೆಗ್ಡೆ ಹಕ್ಲಾಡಿ, ಸಮಾಜ ಸೇವಕರಾದ ದೇವಾನಂದ ಬಾರ್ಕೂರು, ಅಶೋಕ್ ಕುಂದರ್, ಉದ್ಯಮಿ ಮಹೇಶ್ ಉಡುಪ, ಕೆ.ಎಂ.ಸಿ.ಆಸ್ಪತ್ರೆ ಮಣಿಪಾಲದ ವೈದ್ಯ ಡಾ.ಬ್ರಹ್ಮ ಮೊದಲಾದವರು ಉಪಸ್ಥಿತರಿದ್ದರು.

ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ಭಾಗವತ ಸದಾಶಿವ ಅಮಿನ್ ನೆರವೇರಿಸಿದರು. ದಿವಾಕರ ಕುಂದರ್ ವಂದಿಸಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com