ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ: ಕಾಳಾವರದಲ್ಲಿ ಜು.೩೦ ಫೈನಾನ್ಸ್ ಸಂಸ್ಥೆಯ ಮಾಲೀಕ ಅಜೇಂದ್ರ ಶೆಟ್ಟಿಯನ್ನು ಕೊಲೆ ಮಾಡಿದ ಆರೋಪಿ ಅನೂಪ್ ಶೆಟ್ಟಿಯನ್ನು ಸೋಮವಾರ ಕುಂದಾಪುರ ಜೆ.ಎಂ.ಎಫ್.ಸಿ ನ್ಯಾಯಲಯಕ್ಕೆ ಪೋಲಿಸರು ಹಾಜರು ಪಡಿಸಿದ್ದು, ಆರೋಪಿಯನ್ನು ಆ.9 ರ ವರೆಗೆ ಪೋಲಿಸ್ ಕಸ್ಟಡಿ ನೀಡಲಾಗಿದೆ.
ಜು.30 ರಂದು ಅಜೇಂದ್ರ ಶೆಟ್ಟಿಯನ್ನು ಫೈನಾನ್ಸ್ ಕಚೇರಿಯಲ್ಲೇ ಕೊಲೆ ಮಾಡಿ, ಅಜೇಂದ್ರನ ಕಾರಿನಲ್ಲಿ ಪರಾರಿಯಾಗಿದ್ದ ಅನೂಪ್ ನನ್ನು ಗೋವಾದಲ್ಲಿ ಪೊಲೀಸರು ಬಂಧಿಸಿದ್ದರು.
Advertisement. Scroll to continue reading.
ಫೈನಾನ್ಸ್ ಸಂಸ್ಥೆಯಲ್ಲಿ ಪಾಲುದಾರರಾಗಿದ್ದ ಇವರಿಬ್ಬರು ಏಳು ವರ್ಷಗಳಿಂದ ಒಟ್ಟಿಗೆ ವ್ಯವಹಾರ ನಡೆಸುತ್ತಿದ್ದರು. ಆದರೆ ಅಜೇಂದ್ರ ಅನೂಪ್ ನಿಗೆ ಸರಿಯಾಗಿ ಬಡ್ಡಿಯ ಹಣ ನೀಡದೇ ಮೋಸ ಮಾಡುತ್ತಿದ್ದ ಎಂದು ಆರೋಪಿ ಪ್ರಾಥಮಿಕ ತನಿಖೆಯಲ್ಲಿ ಹೇಳಿಕೆ ನೀಡಿದ್ದು, ಆರೋಪಿ ಜೊತೆ ಇನ್ನೂ ಯಾರೆಲ್ಲಾ ಇದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಪ್ರಾಸುಕ್ಯೂಷನ್ ಪರ ಸಹಯಾಕ ಸರಕಾರಿ ಅಭಿಯೋಜಕಿ ವರ್ಷಾಶ್ರೀ ವಾದ ಮಾಡಿದ್ದಾರೆ.