ಕರಾವಳಿ

ಹೆಬ್ರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಲಸಿಕೆಗಾಗಿ ಸಾಮಾಜಿಕ ಅಂತರ ಮರೆತ ಮಂದಿ

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಪ್ರಥಮ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯಲು ಸೋಮವಾರ ಬೆಳಿಗ್ಗೆ ಹೆಬ್ರಿಯ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಲಸಿಕೆಯಾಗಿ ಸಾಮಾಜಿಕ ಅಂತರ ಮರೆತು ಜನರು ಸಾಲು ಸಾಲಾಗಿ ನಿಂತಿದ್ದು ಕಂಡುಬಂತು.
ಇಂದು ಹೆಬ್ರಿಗೆ 700 ಲಸಿಕೆ ಬಂದಿದ್ದು, ಅದರಲ್ಲಿ ಹದಿನೆಂಟು ವರ್ಷದ ಒಳಗಿನ ಅವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮತ್ತು ನಲವತ್ತೈದು ವರ್ಷ ಮೇಲ್ಪಟ್ಟವರಿಗೆ ಲಸಿಕೆ ಲಭ್ಯವಿದೆ ಎಂದು ಆರೋಗ್ಯ ಇಲಾಖೆ ಮುಂಗಡವಾಗಿ ತಿಳಿಸಿದ್ದು, ಆ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆನಿಂದಲೇ ಹೆಬ್ರಿ ತಾಲೂಕಿನ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಆಗಮಿಸಿದ್ದರು.


ಆದರೆ ಸಂಬಂಧಪಟ್ಟ ಇಲಾಖೆಯವರು ಯಾವುದೇ ಪೂರ್ವಯೋಜನೆ ಮಾಡದೆ, ಜನರು ಸಾಮಾಜಿಕ ಅಂತರ ಮರೆತು ಲಸಿಕೆಗಾಗಿ ಮುಗಿಬಿದ್ದರು. ಅದೂ ಅಲ್ಲದೆ ಸೋಮವಾರದಿಂದ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಈ ಜನದಟ್ಟಣೆಯಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಇದು ಲಸಿಕೆ ಹಂಚಿಕೆಯೋ ಅಥವಾ ಕೋವಿಡ್ ವೈರಸ್ ಹಂಚಿಕೆಯೋ ಎಂದು ಚಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ ಪ್ರಭು ಹಾಗೂ ಹೆಬ್ರಿ ಗ್ರಾಪಂ ಅಧ್ಯಕ್ಷೆ ಮಾಲತಿ ಈ ಅವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com