ಪ್ರಧಾನಿ ಮೋದಿ, ಪಿ.ವಿ.ಸಿಂಧುಗೆ ಮಂಗಳೂರಿನ ಪಬ್ಬಾಸ್ ನಿಂದ ಐಸ್ ಕ್ರೀಂ ಆಫರ್
Published
0
ಮಂಗಳೂರು ಎಂದರೆ ತಕ್ಷಣ ನೆನಪಗುವುದು ಪಬ್ಬಾಸ್. ಇಲ್ಲಿ ಬಂದು ಐಸ್ ಕ್ರೀಂ ತಿನ್ನದೇ ಹಾಗೆಯೇ ಹೋದ್ರೆ ಮಂಗಳೂರಿಗೆ ಬಂದು ವೇಸ್ಟ್’ ಅನ್ನುವ ಮಾತು ಕೇಳಿ ಬರುತ್ತೆ. ಜಗತ್ತಿನಾದ್ಯಂತ ತನ್ನ ಕೀರ್ತಿ ಯನ್ನ ಹರಡಿಸಿದೆ. ಆದರೆ ಈಗ ಪಬ್ಬಾಸ್ ಐಡಿಯಲ್ ಐಸ್ ಕ್ರೀಂ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಪಿ.ವಿ.ಸಿಂಧು ಅವರಿಗೆ ಆಫರ್ ಒಂದು ನೀಡಿದೆ. ಅದೇನೆಂದರೆ ಟೋಕಿಯೋ ಒಲಿಂಪಿಕ್ಸ್ 2020ರ ಕಂಚಿನ ಪದಕ ವಿಜೇತೆ, ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಜೊತೆ ಐಸ್ ಕ್ರೀಂ ತಿನ್ನಲು ದಿ ಬೆಸ್ಟ್ ಐಸ್ ಕ್ರೀಂ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪಬ್ಬಾಸ್ ಟ್ವೀಟ್ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಒಲಿಂಪಿಕ್ಸ್ನಿಂದ ಮರಳಿ ಬಂದಾಗ ಒಟ್ಟಿಗೆ ಐಸ್ ಕ್ರೀಂ ತಿನ್ನೋಣ ಎಂದು ಪಿ.ವಿ. ಸಿಂಧುಗೆ ಹೇಳಿದ್ದರು. ಇದೀಗ ಪಬ್ಬಾಸ್ ಈ ಮಾತನ್ನು ನಮ್ಮೊಂದಿಗೆ ಪೂರ್ಣಗೊಳಿಸಿ ಎಂದು ಹೇಳಿದೆ.